ನವದೆಹಲಿ, ಜ. 22 (DaijiworldNews/AK): 77ನೇ ಗಣರಾಜೋತ್ಸವ ದಿನಾಚರಣೆ ಹಿನ್ನಲೆ ಜನವರಿ 26 ರಂದು ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್ಗೂ ಮುನ್ನ ದೆಹಲಿ ಪೊಲೀಸರು ಸುರಕ್ಷತಾ ಕ್ರಮಗಳನ್ನ ಹೆಚ್ಚಿಸಿದ್ದಾರೆ. ಈ ಬಾರಿ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಅಲರ್ಟ್ ಪೋಸ್ಟರ್ಗಳಲ್ಲಿ ಮೊದಲ ಬಾರಿಗೆ ದೆಹಲಿಯ ಸ್ಥಳೀಯ ಭಯೋತ್ಪಾದಕನ ಚಿತ್ರವನ್ನ ಸೇರಿಸಲಾಗಿದೆ.

ಈ ಭಯೋತ್ಪಾದಕನನ್ನ ಮೊಹಮ್ಮದ್ ರೆಹಾನ್ ಎಂದು ಗುರುತಿಸಲಾಗಿದ್ದು, ಅಲ್-ಖೈದಾ ಇನ್ ಇಂಡಿಯನ್ ಸಬ್ಕಾಂಟಿನೆಂಟ್ ಸಂಘಟನೆಗೆ ಸೇರಿದ್ದಾನೆ ಎನ್ನಲಾಗಿದೆ. ರೆಹಾನ್ ದೆಹಲಿ ಪೊಲೀಸ್ ಹಾಗೂ ಕೇಂದ್ರೀಯ ಗುಪ್ತಚರ ಏಜೆನ್ಸಿಗಳ ಕಣ್ತಪ್ಪಿಸಿ ಬಹುಕಾಲದಿಂದ ತಲೆಮರಿಸಿಕೊಂಡಿದ್ದಾನೆ.
ಣರಾಜ್ಯೋತ್ಸವದ ದಿನದಂದು ಭಯೋತ್ಪಾದಕ ದಾಳಿಯ ಎಚ್ಚರಿಕೆ ಇರುವುದರಿಂದ ಆತನ ಪೋಸ್ಟರ್ ಪ್ರಕಟಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆ ಕರ್ತವ್ಯ ಪಥ ಮತ್ತು ಸಂಪೂರ್ಣ ನವದೆಹಲಿ ಜಿಲ್ಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಹುಸ್ತರದ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ದೆಹಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಬಹುಸ್ತರದ ಸುರಕ್ಷಾ ವಲಯ ನಿಯೋಜಿಸಿದೆ. ಸಾವಿರಾರು ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಡ್ವಾನ್ಸ್ಡ್ ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆ ಜೊತೆಗೆ ಸಂಪರ್ಕಿಸಲಾಗಿದೆ. ಅಲ್ಲದೇ ಅಪರಾಧಿ ಹಿನ್ನೆಲೆಯ ವ್ಯಕ್ತಿಗಳು ಅಥವಾ ಕಳ್ಳತನದ ವಾಹನಗಳನ್ನ ಗುರುತಿಸಿದ ತಕ್ಷಣ ಅಲರ್ಟ್ ನೀಡುವ ಎಐ ವ್ಯವಸ್ಥೆಯನ್ನ ನಿಯೋಜಿಸಲಾಗಿದೆ. ಅದಕ್ಕಾಗಿ ಪೊಲೀಸರಿಗೆ ಎಐ ಸ್ಮಾರ್ಟ್ ಕನ್ನಡಕಗಳನ್ನ ನೀಡಲಾಗಿದೆ.
ನಿಷೇಧಿಸಲಾಗಿದೆ.