ನವದೆಹಲಿ,ಜ. 14 (DaijiworldNews/ AK): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ PSLV-C62 ಮಿಷನ್ನ ವೈಫಲ್ಯವು ಎಲ್ಲರಿಗೂ ಅಘಾತವಾಗಿತ್ತು.

16 ಪ್ಯಾಸೆಂಜರ್ಸ್ಗಳನ್ನು ಹೊತ್ತು ಹೊರಟಿದ್ದ ರಾಕೆಟ್ ನಲ್ಲಿ ಕೇವಲ ಕಿಡ್ ಮಾತ್ರ ಬದುಕುಳಿದಿದೆ. ಇಲ್ಲಿ ಪ್ಯಾಸೆಂಜರ್ಸ್ ಎಂದರೆ 16 ಉಪಗ್ರಹಗಳು ಎಂದರ್ಥ. ಸ್ಪ್ಯಾನಿಷ್ ಸ್ಟಾರ್ಟ್ಅಪ್ ಆರ್ಬಿಟಲ್ ಪ್ಯಾರಡೈಮ್ನ “KID” ಕ್ಯಾಪ್ಸುಲ್ ದುರಂತದಿಂದ ಬದುಕುಳಿದಿದೆ.
ಈ ಫುಟ್ಬಾಲ್ ಗಾತ್ರದ ಕ್ಯಾಪ್ಸುಲ್ ದುರಂತದಿಂದ ಬದುಕುಳಿಯುವುದಲ್ಲದೆ ಭೂಮಿಗೆ ಡೇಟಾವನ್ನು ಹಿಂತಿರುಗಿಸಿತು. ಕಾರ್ಯಾಚರಣೆಯ ಸಮಯದಲ್ಲಿ, ರಾಕೆಟ್ನ ಮೂರನೇ ಹಂತದಲ್ಲಿ ವೈಫಲ್ಯ ಎದುರಾಗಿತ್ತು. ಮುಖ್ಯ ಉಪಗ್ರಹವು ಬಾಹ್ಯಾಕಾಶವನ್ನು ತಲುಪುವುದನ್ನು ತಡೆಯಿತು.
ಈ ಸಣ್ಣ, 25 ಕಿಲೋಗ್ರಾಂ ಕ್ಯಾಪ್ಸುಲ್ 28 ಗ್ರಾಂನ ಅಗಾಧ ಒತ್ತಡವನ್ನು ತಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದು ತೀವ್ರವಾದ ಶಾಖದ ನಡುವೆ ಮೂರು ನಿಮಿಷಗಳ ಕಾಲ ನಿರಂತರ ಸಂಕೇತಗಳನ್ನು ಕಳುಹಿಸಿತು.
ಜನವರಿ 12, 2026ರಂದು ಶ್ರೀಹರಿಕೋಟಾದಿಂದ ಇಸ್ರೋ PSLV-C62 ರಾಕೆಟ್ ಉಡಾವಣೆ ಮಾಡಿತ್ತು. ರಾಕೆಟ್ನ ಮೂರನೇ ಹಂತದಲ್ಲಿನ ದೋಷವು ಇಡೀ ಕಾರ್ಯಾಚರಣೆಯನ್ನೇ ತಲೆಕೆಳಗಾಗಿ ಮಾಡಿತ್ತು. ಈ ರಾಕೆಟ್16 ಉಪಗ್ರಹಗಳನ್ನು ಹೊತ್ತು ಹೊರಟಿತ್ತು.