ತಿರುವನಂತಪುರ, ಜ. 14 (DaijiworldNews/TA): ಪ್ರಸಿದ್ಧ ಕೇರಳದ ಶಬರಿಮಲೆ ಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಶಬರಿಮಲೆ 'ಅಯ್ಯಪ್ಪ ಸ್ವಾಮಿ ದೇವರ' ದರ್ಶನಕ್ಕೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು, ಆಗಮಿಸುತ್ತಿದ್ದು, ಮಕರ ಸಂಕ್ರಾಂತಿ ದಿನದಂದು ಕಾಣುವ 'ಜ್ಯೋತಿ' ದರ್ಶನ ಪಡೆದು ಪುನೀತರಾಗಲಿದ್ದಾರೆ.

ಈ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಮಕರ ಜ್ಯೋತಿ (ಮಕರವಿಳಕ್ಕು) ದರ್ಶನಕ್ಕಾಗಿ ಶಬರಿಮಲೆಗೆ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಸಂಬಂಧ ವಿಶೇಷ ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಶಬರಿಮಲೆಯಲ್ಲಿ ಜ್ಯೋತಿ ದರ್ಶನದ ಸಮಯ ಅತ್ಯಧಿಕ ಜನದಟ್ಟಣೆ ಉಂಟಾಗಲಿದೆ.
ಈ ಸಂಬಂಧ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರಿಗೆ ವಿಶೇಷವಾಗಿ 1,000 ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ. ವಾರ್ಷಿಕ ಮಕರವಿಳಕ್ಕು ಹಬ್ಬದ ದಟ್ಟಣೆ ಗಮನಿಸಿ ತಿರುವಾಂಕೂರು ದೇವಸ್ವಂ ಮಂಡಳಿಯು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.