ನವದೆಹಲಿ, ಡಿ. 29 (DaijiworldNews/AA): ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ತ್ರಿಪುರಾ ವಿದ್ಯಾರ್ಥಿಯ ಹತ್ಯೆಯನ್ನು 'ಭಯಾನಕ ದ್ವೇಷದ ಅಪರಾಧ' ಆಡಳಿತಾರೂಢ ಬಿಜೆಪಿ ದ್ವೇಷವನ್ನು 'ಸಾಮಾನ್ಯಗೊಳಿಸುತ್ತಿದೆ' ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ವಿದ್ಯಾರ್ಥಿಯ ಹತ್ಯೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ದ್ವೇಷವು ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ. ಡೆಹ್ರಾಡೂನ್ನಲ್ಲಿ ಏಂಜೆಲ್ ಚಕ್ಮಾ ಮತ್ತು ಅವರ ಸಹೋದರ ಮೈಕೆಲ್ಗೆ ಏನಾಯಿತು ಎಂಬುದು ಭಯಾನಕ ದ್ವೇಷದ ಅಪರಾಧ" ಎಂದು ಬರೆದುಕೊಂಡಿದ್ದಾರೆ.
"ದ್ವೇಷವು ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ. ವಿಶೇಷವಾಗಿ ನಮ್ಮ ಯುವ ಜನತೆಗೆ ವಿಷಕಾರಿ ಅಂಶಗಳನ್ನು ತುಂಬುವ ಮೂಲಕ ಮತ್ತು ಬೇಜವಾಬ್ದಾರಿತನದ ಹೇಳಿಕೆಗಳಿಂದ ಅದನ್ನು ಸಾಮಾನ್ಯಗೊಳಿಸಲಾಗುತ್ತಿದೆ. ಆಡಳಿತಾರೂಢ ಬಿಜೆಪಿಯ ದ್ವೇಷದ ನಾಯಕತ್ವದಿಂದ ಇದನ್ನು ಸಾಮಾನ್ಯ ಎಂಬಂತೆ ಮಾಡಲಾಗುತ್ತಿದೆ. ಭಾರತವನ್ನು ಗೌರವ ಮತ್ತು ಏಕತೆಯ ಮೇಲೆ ನಿರ್ಮಿಸಲಾಗಿದೆ. ಭಯ ಮತ್ತು ನಿಂದನೆ ಮೇಲೆ ಅಲ್ಲ" ಎಂದು ತಿಳಿಸಿದ್ದಾರೆ.
"ದ್ವೇಷವು ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ. ವಿಶೇಷವಾಗಿ ನಮ್ಮ ಯುವ ಜನತೆಗೆ ವಿಷಕಾರಿ ಅಂಶಗಳನ್ನು ತುಂಬುವ ಮೂಲಕ ಮತ್ತು ಬೇಜವಾಬ್ದಾರಿತನದ ಹೇಳಿಕೆಗಳಿಂದ ಅದನ್ನು ಸಾಮಾನ್ಯಗೊಳಿಸಲಾಗುತ್ತಿದೆ. ಆಡಳಿತಾರೂಢ ಬಿಜೆಪಿಯ ದ್ವೇಷದ ನಾಯಕತ್ವದಿಂದ ಇದನ್ನು ಸಾಮಾನ್ಯ ಎಂಬಂತೆ ಮಾಡಲಾಗುತ್ತಿದೆ. ಭಾರತವನ್ನು ಗೌರವ ಮತ್ತು ಏಕತೆಯ ಮೇಲೆ ನಿರ್ಮಿಸಲಾಗಿದೆ. ಭಯ ಮತ್ತು ನಿಂದನೆ ಮೇಲೆ ಅಲ್ಲ" ಎಂದು ಪೋಸ್ಟ್ ಮಾಡಿದ್ದಾರೆ.
ಡಿಸೆಂಬರ್ 9 ರಂದು ಡೆಹ್ರಾಡೂನ್ನಲ್ಲಿ ನಡೆದಿದ್ದ ಜನಾಂಗೀಯ ನಿಂದನೆಯನ್ನು ವಿರೋಧಿಸಿದ ಪಶ್ಚಿಮ ತ್ರಿಪುರಾ ಜಿಲ್ಲೆಯ ನಂದನ್ನಗರದ ಎಂಬಿಎ ವಿದ್ಯಾರ್ಥಿ ಏಂಜೆಲ್ ಚಕ್ಮಾ(24) ಮೇಲೆ ಆರು ಜನರ ಗುಂಪು ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಡಿಸೆಂಬರ್ 26 ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.