ರಾಂಚಿ, ಡಿ. 20 (DaijiworldNews/AA): ಕರ್ತವ್ಯದಲ್ಲಿದ್ದಾಗ 22 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜಾರ್ಖಂಡ್ನ ರಾಂಚಿಯಲ್ಲಿ ಯೋಧನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

"ಗುರುವಾರ ಸಂಜೆ 5.30ರ ಸುಮಾರಿಗೆ ತತಿಸಿಲ್ವಾಯಿ ರೈಲು ನಿಲ್ದಾಣದಲ್ಲಿ ಮಹಿಳೆ ರಾಂಚಿಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. 42 ವರ್ಷದ ಯೋಧ ಮಹಿಳೆಯನ್ನು ರೈಲಿನ ಖಾಲಿ ಕೋಚ್ಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
"ಸೇನಾ ಸಿಬ್ಬಂದಿ ರಕ್ಷಣಾ ಲಾಜಿಸ್ಟಿಕ್ಸ್ ರೈಲಿನ ಕಾವಲು ಕರ್ತವ್ಯದಲ್ಲಿದ್ದರು. ಅಪರಾಧ ಮಾಡಿದಾಗ ಅವರು ಕುಡಿದ ಮತ್ತಿನಲ್ಲಿದ್ದರು ಎಂದು ವರದಿಯಾಗಿದೆ. ಆರೋಪಿ ಜವಾನ್ ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯ ಸರ್ಹಾ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಪಂಜಾಬ್ನ ಪಟಿಯಾಲದಲ್ಲಿರುವ 42 ಮೀಡಿಯಂ ರೆಜಿಮೆಂಟ್ನಲ್ಲಿ ನಿಯೋಜಿಸಲಾಗಿತ್ತು" ಎಂದು ಎಂದು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿ ಹೇಳಿದ್ದಾರೆ.
"ಸಹಾಯಕ್ಕಾಗಿ ಆಕೆಯ ಕೂಗು ಕೇಳಿದ ನಂತರ, ರೈಲ್ವೆ ನಿಲ್ದಾಣದಲ್ಲಿ ಜನರು ಜಮಾಯಿಸಿದ್ದಾರೆ. ಬಳಿಕ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಜವಾನ ಪರಾರಿಯಾಗಲು ಯತ್ನಿಸಿ, ಗಾಯಗೊಂಡಿದ್ದಾನೆ. ಆದರೂ, ಪೊಲೀಸರು ಆತನನ್ನು ಬಂಧಿಸಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಶುಕ್ರವಾರ, ಆರೋಪಿ ಯೋಧನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.