ಬೆಂಗಳೂರು, ಡಿ. 08 (DaijiworldNews/AA): ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿ ಐದಾರು ದಿನಗಳಿಂದ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ. ಪ್ರಯಾಣಿಕರಲ್ಲದೆ ಹೊರ ರಾಜ್ಯ, ರಾಷ್ಟ್ರಗಳಲ್ಲಿ ಚಿಕಿತ್ಸೆಗಾಗಿ ತೆರಳುವ ರೋಗಿಗಳಿಗೂ ಕೂಡ ವಿಮಾನಗಳು ಸಿಗದೇ ಪರದಾಡುವಂತಾಗಿದೆ.

ಐ ಕ್ಯಾಟ್ ಏರ್ ಆಂಬ್ಯುಲೆನ್ಸ್ ಸಂಸ್ಥೆಯಿಂದ ರೋಗಿಗಗಳನ್ನ ಖಾಸಗಿ ವಿಮಾನಗಳಲ್ಲಿ ಏರ್ ಲಿಫ್ಟ್ ಮಾಡಲಾಗುತ್ತೆ. ಆಸ್ಪತ್ರೆಗೆ ದಾಖಲಿಸುವ ಮುನ್ನ, ಬೆಂಗಳೂರಿನಿಂದ ತೆರಳಿ ಆಸ್ಪತ್ರೆಯ ಬೆಡ್ ಕಾಯ್ದಿರಿಸಿ ಬರಲಾಗುತ್ತೆ. ಬೆಂಗಳೂರಿನಿಂದ ಬೇರೆ ಬೇರೆ ಏರ್ ಲೈನ್ಸ್ ವಿಮಾನಗಳ ಮೂಲಕ ಹೋಗಿ ಬರಲಾಗುತ್ತೆ. ಅದಾದ ಬಳಿಕ ನೇರವಾಗಿ ರೋಗಿಯನ್ನು ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗುತ್ತೆ. ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನಲೆ, ವಿಮಾನ ಟಿಕೆಟ್ ದರ ಹೆಚ್ಚಾಗಿದೆ. ಹೀಗಾಗಿ ಅನಿವಾರ್ಯವಾಗಿ ಏರ್ ಆಂಬ್ಯುಲೆನ್ಸ್ಗಳ ದರವೂ ಏರಿಕೆಯಾಗಿದೆ.
ಇದರ ಮೂಲಕ ರೋಗಿಗಳನ್ನು ಶಿಫ್ಟ್ ಮಾಡೋಕು ಸಮಸ್ಯೆಯಾಗ್ತಿದೆ. ದರ ಏರಿಕೆಯ ನಡುವೆಯೂ ಸಕಾಲಕ್ಕೆ ಹೊರ ರಾಜ್ಯ, ಹೊರ ರಾಷ್ಟ್ರಗಳಲ್ಲಿ ಚಿಕಿತ್ಸೆ ಪಡೆಯಲಾಗದೆ ರೋಗಿಗಳು ಒದ್ದಾಡುವಂತಾಗಿದೆ.