ನವದೆಹಲಿ,ಡಿ. 03 (DaijiworldNews/ AK): ಸಂಸತ್ ಭವನದ ಆವರಣಕ್ಕೆ ನಾಯಿ ತಂದ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ ಕಾಂಗ್ರೆಸ್ ರಾಜ್ಯಸಭಾ ಸಂಸದೆ ರೇಣುಕಾ ಚೌಧರಿ ʼಬೌ ಬೌʼ ಎಂದು ಬೊಗಳಿ ಉತ್ತರ ನೀಡಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.

ಆಡಳಿತ ಪಕ್ಷದ ಸದಸ್ಯರು ನಿಮ್ಮ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಾಡಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಸಿಟ್ಟಾದ ಅವರು ನಾಯಿ ಬೊಗಳುವ ರೀತಿ ಪ್ರತಿಕ್ರಿಯಿಸಿದ್ದಾರೆ. ಹಕ್ಕು ಚ್ಯುತಿಯನ್ನು ಯಾವಾಗ ತರಲಾಗುತ್ತದೆ ಎಂದು ನಾನು ನೋಡುತ್ತೇನೆ. ಇದಕ್ಕೆ ನಾನು ಸೂಕ್ತ ಉತ್ತರವನ್ನು ನೀಡುತ್ತೇನೆ ಎಂದು ಕಿಡಿಕಾರಿದರು.
ಮಾಲಿನ್ಯದಿಂದಾಗಿ ಜನರು ಸಾಯುತ್ತಿದ್ದಾರೆ ಮತ್ತು ಯಾರೂ ಅದರ ಬಗ್ಗೆ ಚಿಂತಿಸುತ್ತಿಲ್ಲ. ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಕುಟುಂಬಗಳು ನಾಶವಾಗುತ್ತಿವೆ. ಕಾರ್ಮಿಕ ಕಾನೂನುಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಸಂಚಾರ್ ಸಾಥಿ ಆ್ಯಪ್ ಅನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಆದರೆ ರೇಣುಕಾ ಚೌಧರಿ ಅವರ ನಾಯಿ ಅವರನ್ನು ಕೆರಳಿಸಿದೆ. ಇದಕ್ಕೆ ನಾನು ಏನು ಹೇಳಲಿ ಎಂದು ಪ್ರಶ್ನಿಸಿದರು.