ನವದೆಹಲಿ, ನ. 28 (DaijiworldNews/ TA): ಮೂವತ್ತರಿಂದ ನಲವತ್ತು ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ದೆಹಲಿ-ವಾರಾಣಸಿ ಸ್ಲೀಪರ್ ಬಸ್ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೆ ಭಾರಿ ದುರಂತವೊಂದು ತಪ್ಪಿದೆ ಎನ್ನಲಾಗಿದೆ.

ಬಸ್ ವಾರಾಣಸಿಗೆ ಹೋಗುತ್ತಿತ್ತು, ಮೇಲಿನ ಡೆಕ್ನಲ್ಲಿ ಇರಿಸಿಲಾಗಿದ್ದ ಸಾಮಾಗ್ರಿಗಳಿಂದ ಹಠಾತ್ ಹೊಗೆ ಬೆಂಕಿಗೆ ಕಾರಣವಾಗಿತ್ತು. ಬಸ್ ಚಾಲಕ ಮತ್ತು ನಿರ್ವಾಹಕ ಕೂಡಲೇ ಎಚ್ಚರಿಕೆ ನೀಡಿದ್ದರು. ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಲು ಪ್ರಯತ್ನಿಸಿದರು ಅಷ್ಟರಲ್ಲಾಗಲೇ ಬೆಂಕಿ ಹೊತ್ತಿಕೊಳ್ಳಲು ಶುರುವಾಗಿತ್ತು ಎನ್ನಲಾಗಿದೆ.
ಬಸ್ಸಿನ ಮೇಲ್ಛಾವಣಿಯಲ್ಲಿದ್ದ ಭಾರವಾದ ಲಗೇಜಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಪ್ರಯಾಣಿಕರು ಕೂಡಲೇ ಹೊರ ನಡೆದರು. ಕೆಲವರು ಕಿಟಕಿಗಳಿಂದ ಕೆಳಗೆ ಹಾರಿದ್ದಾರೆ. ಕೆಲವರು ಸಿಕ್ಕಿಹಾಕಿಕೊಂಡಿದ್ದರು. ಬೆಂಕಿಯನ್ನು ಕಡಿಮೆ ಮಾಡಲು ನೀರಿನ ಬಾಟಲಿಗಳನ್ನು ಎಸೆದಿದ್ದರು.
ಪ್ರಯಾಣಿಕನೊಬ್ಬನ ಬ್ಯಾಗ್ನಲ್ಲಿ 20,000 ರೂ. ನಗದು, ಬಟ್ಟೆಗಳು ಮತ್ತು ಪ್ರಮುಖ ದಾಖಲೆಗಳು ಸುಟ್ಟುಹೋಗಿವೆ ಎನ್ನಲಾಗಿದೆ. ಮದುವೆಗೆ ಮಿರ್ಜಾಪುರಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಲಡ್ಡು ಗೋಪಾಲ್ ವಿಗ್ರಹ, ಲ್ಯಾಪ್ಟಾಪ್, ಬಟ್ಟೆಗಳು ಮತ್ತು 40,000 ರೂ. ಮೌಲ್ಯದ ಆಭರಣಗಳಿಟ್ಟುಕೊಂಡಿದ್ದರು ಅವು ಕೂಡ ಸುಟ್ಟುಹೋಗಿವೆ ಎಂದು ಹೇಳಿಕೆ ನೀಡಿದ್ದಾರೆ.
ಮಾಹಿತಿ ಪಡೆದ ನಂತರ ಅಗ್ನಿಶಾಮಕ ಇಲಾಖೆ ತ್ವರಿತವಾಗಿ ಕಾರ್ಯನಿರ್ವಹಿಸಿತ್ತು. ಮತ್ತು ಸಿಎಫ್ಒ ದೀಪಕ್ ಶರ್ಮಾ ರಕ್ಷಣಾ ಕಾರ್ಯಾಚರಣೆಗಾಗಿ ತಕ್ಷಣವೇ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸುಮಾರು ಒಂದು ಗಂಟೆ ಶ್ರಮಿಸಬೇಕಾಯಿತು.