ಬೆಂಗಳೂರು, ನ. 25 (DaijiworldNews/AA): ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 47 ಲಕ್ಷ ರೂ. ಪತ್ತೆಯಾಗಿದೆ.

ದರೋಡೆ ಪ್ರಕರಣದ ತನಿಖೆ ಚುರುಕುಗೊಳಿಸಿದ ದಕ್ಷಿಣ ವಿಭಾಗ ಪೊಲೀಸರು, ನ.24 ರಂದು ರಾತ್ರಿ ಆರೋಪಿ ನವೀನ್ ಮನೆಯಲ್ಲಿ ಸುಮಾರು 47 ಲಕ್ಷ ರೂ. ಹಣ ಪತ್ತೆ ಮಾಡಿದ್ದಾರೆ. ಪ್ರಕರಣ ಆರೋಪಿಗಳ ಪೈಕಿ ನವೀನ್, ರವಿ ಸೇರಿದಂತೆ ಮೂವರನ್ನು ಹೈದರಾಬಾದ್ ಲಾಡ್ಜ್ವೊಂದರಲ್ಲಿ ಬಂಧಿಸಲಾಗಿತ್ತು. ಈ ವೇಳೆ 54 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದಾದ ಬಳಿಕ ಮೂವರ ವಿಚಾರಣೆ ನಡೆಸಿದಾಗ ಮನೆಯಲ್ಲಿಟ್ಟಿರುವುದಾಗಿ ನವೀನ್ ತಿಳಿಸಿದ್ದಾನೆ. ಅದರಂತೆ ಪೊಲೀಸರು 47 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಇನ್ನುಳಿದ 10 ಲಕ್ಷ ರೂ.ಯನ್ನು ಸುಮನಹಳ್ಳಿ ಜಂಕ್ಷನ್ ಟೀ ಅಂಗಡಿ ಬಳಿ ಕೊಟ್ಟಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಅದರ ಹೊರತಾಗಿ ಸದ್ಯ ಪೊಲೀಸರು ಸಂಪೂರ್ಣ ಹಣ ಸೀಜ್ ಮಾಡಿದ್ದಾರೆ. ಈವರೆಗೆ 7.01 ಕೋಟಿ ರೂ. ಹಣ ಜಪ್ತಿಯಾಗಿದ್ದು, ಉಳಿದ 10 ಲಕ್ಷ ರೂ. ಪತ್ತೆಗಾಗಿ ತನಿಖೆ ಮುಂದುವರೆದಿದೆ.
ಇನ್ನೂ ಬಂಧಿತ ಆರೋಪಿಗಳ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಒಂಭತ್ತು ಮಂದಿಯನ್ನ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.