ನವದೆಹಲಿ, ನ. 15 (DaijiworldNews/AK): ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಗೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಆದರೆ ಎಲ್ಲರೂ ಯಶಸ್ವಿಯಾಗುವುದಿಲ್ಲ. ಅವರಲ್ಲಿ ಕೆಲವರು ತಮ್ಮ ವಿಶೇಷ ತಯಾರಿಯಿಂದಾಗಿ ಯಶಸ್ಸನ್ನು ಸಾಧಿಸುತ್ತಾರೆ ಅದೇ ರೀತಿಯ ದೆಹಲಿಯ ಸರ್ಜನಾ ಯಾದವ್ ಅವರ ಕಥೆ.

ಉದ್ಯೋಗದೊಂದಿಗೆ ತರಬೇತಿ ಪಡೆಯದೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ ಇವರು 3ನೇ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸುವ ಮೂಲಕ ಐಎಎಸ್ ಆಗುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಇವರು ಯಾವುದೇ ಕೋಚಿಂಗ್ ಇಲ್ಲದೇ ತಯಾರಿ ನಡೆಸಿ ಐಎಎಸ್ ಆಗಿದ್ದಾರೆ. ಸರ್ಜನಾ ಯಾದವ್ ಪೂರ್ಣ ಸಮಯದ ಉದ್ಯೋಗದೊಂದಿಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದರೆ ಮೊದಲ ಎರಡು ಪ್ರಯತ್ನಗಳಲ್ಲಿ ಅವರು ಯಶಸ್ವಿಯಾಗಲಿಲ್ಲ. ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೂ ಎದೆಗುಂದದೆ ತನ್ನ ತಪ್ಪುಗಳಿಂದ ಸಾಕಷ್ಟು ಕಲಿತ ಅವರು ತಮ್ಮ 3ನೇ ಪ್ರಯತ್ನದಲ್ಲಿ ಯಶಸ್ವಿಯಾದರು.
ಸರ್ಜನಾ ಯಾದವ್ ಯುಪಿಎಸ್ಸಿ ಪರೀಕ್ಷೆಯ ತಯಾರಿಗಾಗಿ ಸಾಕಷ್ಟು ಶ್ರಮಿಸಿದ್ದರು, ಆದರೆ ಯಶಸ್ವಿಯಾಗಲಿಲ್ಲ. ಇದಾದ ಬಳಿಕ 2018ರಲ್ಲಿ ಕೆಲಸ ಬಿಟ್ಟು ತಯಾರಿ ನಡೆಸಲು ನಿರ್ಧರಿಸಿದರು. ಅವರು ಯಾವುದೇ ತರಬೇತಿಗೆ ಸೇರಲಿಲ್ಲ ಮತ್ತು ಸ್ವಯಂ ಅಧ್ಯಯನವನ್ನೇ ಅವಲಂಬಿಸಿ ಸಿದ್ಧತೆ ನಡೆಸಿದರು. ಸ್ವಯಂ ಅಧ್ಯಯನದ ಮೂಲಕ ಸರ್ಜನಾ ಯಾದವ್ ಅವರು 2019ರಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 126ನೇ ರ್ಯಾಂಕ್ ಗಳಿಸಿದರು ಮತ್ತು 3ನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿದರು.