ನವದೆಹಲಿ, ಅ. 18 (DaijiworldNews/AK): ದೆಹಲಿಯ ಬಿಶಂಭರ್ ದಾಸ್ ಮಾರ್ಗದಲ್ಲಿರುವ ಕಾವೇರಿ ಅಪಾರ್ಟ್ಮೆಂಟ್ನಲ್ಲಿ ಇಂದು ಮಧ್ಯಾಹ್ನ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಈ ಅಪಾರ್ಟ್ಮೆಂಟ್ ಅನ್ನು ಸಂಸದರಿಗೆ ವಾಸ್ತವ್ಯಕ್ಕೆ ನೀಡಲಾಗಿದೆ.

ಈ ಅಪಾರ್ಟ್ಮೆಂಟ್ನಲ್ಲಿ ಹಲವು ರಾಜ್ಯಸಭಾ ಮತ್ತು ಲೋಕಸಭಾ ಸಂಸದರು ವಾಸವಾಗಿದ್ದಾರೆ. ಬೆಂಕಿಯನ್ನು ನಂದಿಸಲು ಹಲವಾರು ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜಿಸಲಾಗಿದೆ.
ದೆಹಲಿಯ ಕಾವೇರಿ ಅಪಾರ್ಟ್ಮೆಂಟ್ನಲ್ಲಿ ಹಲವಾರು ಸಂಸದರ ವಸತಿ ನಿಲಯಗಳಿವೆ. ಟಿಟಿಎಲ್ ಸೇರಿದಂತೆ 14 ವಾಹನಗಳನ್ನು ನಾವು ತಕ್ಷಣ ಕಳುಹಿಸಿದ್ದೇವೆ. ಇಲ್ಲಿಯವರೆಗೆ, ಹೆಚ್ಚಿನ ಹಾನಿ ಸ್ಟಿಲ್ಟ್ ಮಹಡಿಯಲ್ಲಿ ಸಂಭವಿಸಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಎಡಿಒ ಭೂಪೇಂದರ್ ಹೇಳಿದ್ದಾರೆ.
ಈ ಬೆಂಕಿ ಅಪಘಾತ ಸ್ಥಳೀಯರಲ್ಲಿ ಭಯವನ್ನುಂಟು ಮಾಡಿದೆ. ಬೆಂಕಿ ಅವಘಡಕ್ಕೆ ಕಾರಣವೇನೆಂದು ಇನ್ನೂ ತಿಳಿದಿಲ್ಲ. ಇದಲ್ಲದೆ, ಯಾವುದೇ ಸಾವುನೋವು ಅಥವಾ ಯಾವುದೇ ರೀತಿಯ ಹಾನಿ ವರದಿಯಾಗಿಲ್ಲ.