ಬೆಂಗಳೂರು, ಸೆ. 29 (DaijiworldNews/AK):ಕಾಂಗ್ರೆಸ್ ಸರ್ಕಾರದಲ್ಲಿ ದುಪ್ಪಟ್ಟು ಕಮಿಷನ್ ಪಡೆಯುತ್ತಿದ್ದಾರೆಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಸಿಎಂಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಸಿಎಂಗೆ ಗುತ್ತಿಗೆದಾರರು ಪತ್ರ ಬರೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗುತ್ತಿಗೆದಾರರು ಸಿಎಂಗೆ ಪತ್ರ ಬರೆದು ಇದು ಭ್ರಷ್ಟ ಸರ್ಕಾರ ಅಂದಿದ್ದಾರೆ. ಹಿಂದಿನ ಸರ್ಕಾರಗಳಿಗಿಂತ ದುಪ್ಪಟ್ಟು ಕಮಿಷನ್ ಪಡೀತಿದ್ದಾರೆಂದು ಆರೋಪಿಸಿದ್ದಾರೆ.
ನಮ್ಮ ಮೇಲೆ ಕಮಿಷನ್ ಆರೋಪ ಮಾಡಿದ್ದ ಸಿದ್ದರಾಮಯ್ಯ ಈಗೇನು ಅಂತಾರೆ? ಗುತ್ತಿಗೆದಾರರು ಈ ಸರ್ಕಾರ 80% ಕಮೀಷನ್ ಸರ್ಕಾರ ಅಂತ ಆರೋಪಿಸಿದ್ದಾರೆ. ರೆಡ್ ಹ್ಯಾಂಡಾಗಿ ಲಂಚ ಹೊಡೆಯುತ್ತಿರುವ ಆರೋಪ ಮಾಡಿದ್ದಾರೆ. ಈ ಸರ್ಕಾರದವರಿಗೆ ನೈತಿಕತೆ ಇದರೆ ಅಧಿಕಾರ ಬಿಟ್ಟು ತೊಲಗಲಿ. ಯಾವ ಮುಖ ಇಟ್ಕೊಂಡು ಆಡಳಿತ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.