ನವದೆಹಲಿ, ಸೆ. 29 (DaijiworldNews/AA): ಕ್ರಿಕೆಟ್ನಿಂದ ದೇಶಭಕ್ತಿ ಅಳೆಯಲು ಸಾಧ್ಯವಿಲ್ಲ. ಕ್ರಿಕೆಟ್ ಗೆದ್ದರೆ ಯುದ್ಧವನ್ನೇ ಗೆದ್ದಂತಾಗಿಬಿಡ್ತಾ? ಅಂತ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.

ಪಾಕ್ ವಿರುದ್ಧ ಟೀಂ ಇಂಡಿಯಾ ಏಷ್ಯಾಕಪ್ ಗೆದ್ದ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಹಲ್ಗಾಮ್ ಘಟನೆ ಜನರ ಮನಸ್ಸಿನಿಂದ ಇನ್ನೂ ಅಳಿಸಿಲ್ಲ, ನೋವು ಹಾಗೇ ಇದೆ. ಈ ಸಂದರ್ಭದಲ್ಲಿ ಪಾಕ್ ಜೊತೆಗೆ ಕ್ರಿಕೆಟ್ ಆಡೋದು ಬೇಕಿತ್ತಾ? ನಿಜವಾದ ದೇಶಭಕ್ತಿ ಇದ್ರೆ ಕ್ರಿಕೆಟ್ ಅಲ್ಲ ಯಾವುದೇ ಸಂಬಂಧ ಇಟ್ಕೊಬಾರ್ದು" ಎಂದರು.
"ಈ ಆಟದಲ್ಲಿ ಸಾವಿರಾರು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತೆ. ಅಮಿತ್ ಶಾ ಪುತ್ರ ಜಯ್ ಶಾ ಬ್ಯುಸಿನೆಸ್ ಮಾಡೋಕೆ ಪಂದ್ಯ ಆಯೋಜಿಸ್ತಿದ್ದಾರೆ. ಇವರಿಗೆ ಕಾಂಗ್ರೆಸ್ ದೇಶಭಕ್ತಿ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಕ್ರಿಕೆಟ್ ಗೆದ್ದರೇ ಯುದ್ಧ ಗೆದ್ದಂತಾಗಿಬಿಡ್ತಾ" ಎಂದು ಪ್ರಶ್ನಿಸಿದ್ದಾರೆ.