ಹಿಮಾಚಲ ಪ್ರದೇಶ, ಸೆ. 15 (DaijiworldNews/AA): ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಹಲವಾರು ಅಭ್ಯರ್ಥಿಗಳ ಕನಸಾಗಿರುತ್ತದೆ. ಹೀಗೆ ತಮ್ಮ ಕನಸನ್ನು ಮೊದಲ ಪ್ರಯತ್ನದಲ್ಲೇ ನನಸಾಗಿಸಿಕೊಂಡ ಐಎಎಸ್ ಅಧಿಕಾರಿ ಸಚಿನ್ ಶರ್ಮಾ ಅವರ ಯಶೋಗಾಥೆ ಇದು.

ಹರಿಯಾಣದ ಜಜ್ಜರ್ ಮೂಲದ ಸಚಿನ್ ಶರ್ಮಾ ಅವರು ಗುರುಗ್ರಾಮದ ಡಿಎವಿ ಶಾಲೆಯಲ್ಲಿ ತಮ್ಮ ಇಂಟರ್ಮೀಡಿಯೇಟ್ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ, ಎಲೆಕ್ಟ್ರಾನಿಕ್ಸ್ನಲ್ಲಿ ಬಿ.ಟೆಕ್ ಪದವಿ ಪಡೆದರು. ಅಧ್ಯಯನ ಮುಗಿದ ನಂತರ, ಸಚಿನ್ ಶರ್ಮಾ ಹಲವಾರು ವರ್ಷಗಳ ಕಾಲ ಒಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದರು.
ಈ ಸಮಯದಲ್ಲಿ, ಶರ್ಮಾ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದರು. 2022 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 233ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.
ಸಚಿನ್ ಅವರ ತಂದೆ ಸುನಿಲ್ ದತ್ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ನಿವೃತ್ತ ಇನ್ಸ್ಪೆಕ್ಟರ್ ಆಗಿದ್ದಾರೆ. ಸಚಿನ್ ಐದು ಒಡಹುಟ್ಟಿದವರಲ್ಲಿ ಕಿರಿಯವರು. ಪ್ರಸ್ತುತ, ಅವರು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿ (ಎಸ್ಡಿಎಂ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಅವರ ಪುತ್ರಿ ಡಾ. ಆಸ್ಥಾ ಅಗ್ನಿಹೋತ್ರಿ ಅವರನ್ನು ಮದುವೆಯಾಗುವುದಾಗಿ ಸಚಿನ್ ಅವರು ಘೋಷಿಸಿದ್ದಾರೆ.