ಶಿವಮೊಗ್ಗ, ಆ. 21 (DaijiworldNews/AK):ಮೈಸೂರಿನ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಗ್ರೇಶಿಯನ್ ರೋಡ್ರಿಗಸ್ ಮತ್ತು ಇತರ ಸದಸ್ಯರು ಮೈಸೂರಿಗೆ ಹೊಸದಾಗಿ ನಿಯೋಜಿತರಾದ ಬಿಷಪ್ ಶ್ರೀ.ಫ್ರಾನ್ಸಿಸ್ ಸೆರಾವ್ ರವರನ್ನು ಶಿವಮೊಗ್ಗದಲ್ಲಿ ಭೇಟಿಯಾಗಿ ಅಭಿನಂದಿಸಿದರು.

ಮೈಸೂರು ಧರ್ಮ ಕ್ಷೇತ್ರದ ಹೊಸ ಬಿಷಪ್ರನ್ನಾಗಿ ಡಾ.ಫ್ರಾನ್ಸಿಸ್ ಸೆರಾವ್ ಅವರನ್ನು ಪೋಪ್ 14ನೇ ಲಿಯೋ ಶುಕ್ರವಾರ ನೇಮಕ ಮಾಡಿದ್ದಾರೆ. ಸೆರಾವ್ ಅವರು ಶಿವಮೊಗ್ಗ ಧರ್ಮ ಕ್ಷೇತ್ರದ ಬಿಷಪ್ ಹಾಗೂ ಕಾನ್ಛರೆನ್ಸ್ ಆಫ್ ಕ್ಯಾಥೋಲಿಕ್ ಬಿಷಪ್ ಆಫ್ ಇಂಡಿಯಾದ ಕ್ರೈಸ್ತ ಧರ್ಮದ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.