ಶಿವಮೊಗ್ಗ, ಆ. 15 (DaijiworldNews/AK): ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ತಮಿಳುನಾಡಿನ ತಿರುನೆಲ್ವೇಲಿ - ಶಿವಮೊಗ್ಗ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು ಸಂಚರಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 17ರಂದು ತಿರುನೆಲ್ವೇಲಿಯಿಂದ ಶಿವಮೊಗ್ಗಕ್ಕೆ (ರೈಲು ಸಂಖ್ಯೆ 06103) ಒಂದು ಟ್ರಿಪ್ ರೈಲು ಸಂಚರಿಸಲಿದೆ. ಆಗಸ್ಟ್ 18ರಂದು ಶಿವಮೊಗ್ಗದಿಂದ ತಿರುನೆಲ್ವೇಲಿಗೆ (ರೈಲು ಸಂಖ್ಯೆ 06104) ಒಂದು ಟ್ರಿಪ್ ರೈಲು ಸಂಚರಿಸಲಿದೆ.
ವಿಶೇಷ ರೈಲು ತಿರುನೆಲ್ವೇಲಿಯಿಂದ ಭಾನುವಾರ ಸಂಜೆ 4:20ಕ್ಕೆ ಹೊರಡಲಿದೆ. ಸೋಮವಾರ ಮಧ್ಯಾಹ್ನ 1:00 ಗಂಟೆಗೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಸೋಮವಾರ ಮಧ್ಯಾಹ್ನ 2:20ಕ್ಕೆ ಹೊರಡಲಿದೆ. ಮಂಗಳವಾರ ಬೆಳಗ್ಗೆ 10:45ಕ್ಕೆ ತಿರುನಲ್ವೆಲಿಗೆ ತಲುಪಲಿದೆ. ಈ ರೈಲು ಭದ್ರಾವತಿ, ಅರಸಿಕೆರೆ ಬೆಂಗಳೂರು ಮಾರ್ಗವಾಗಿ ತಮಿಳುನಾಡಿನ ತಿರುನಲ್ವೆಲಿ ತಲುಪಲಿದೆ.
ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಹೊಂದಿದ್ದು, ಈ ಪೈಕಿ 2 ಟೈರ್ ಎಸಿ ಕೋಚ್ – 1, 3 ಟೈರ್ ಎಸಿ ಕೋಚ್ – 1, 3 ಟೈರ್ ಸ್ಲೀಪರ್ ಕೋಚ್ -9, ಜನರಲ್ ಕೋಚ್ – 4, ಸಿಟ್ಟಿಂಗ್ ಕಮ್ ಲಗೇಜ್ ಕೋಚ್ – 2 ಬೋಗಿಗಳನ್ನು ಹೊಂದಿರುತ್ತದೆ.