ಬೆಂಗಳೂರು, ಜು. 26 (DaijiworldNews/AA): ಆಡಳಿತಾರೂಢ ಕಾಂಗ್ರೆಸ್ನಲ್ಲೇ ಸಿಎಂ ಕುರ್ಚಿ ಕದನ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಪೋಸ್ಟ್ನಲ್ಲಿ ಸ್ಕ್ಯಾನರ್ ಕೂಡ ಹಂಚಿಕೊಂಡಿದ್ದಾರೆ. ಸ್ಕ್ಯಾನ್ ಮಾಡಿದರೆ ರಣದೀಪ್ ಸುರ್ಜೇವಾಲಾರ ಫೇಸ್ಬುಕ್ ಖಾತೆ ತೆರೆದುಕೊಳ್ಳುತ್ತದೆ. ಪರೋಕ್ಷವಾಗಿ ‘ಇದು ಸುರ್ಜೇವಾಲ ಸರ್ಕಾರ’ ಎಂದು ನಿಖಿಲ್ ತಿರುಗೇಟು ಕೊಟ್ಟಿದ್ದಾರೆ.
ಕರ್ನಾಟಕವು ಕನ್ನಡಿಗ ಸಿಎಂಗೆ ಮತ ಹಾಕಿದೆ. ಆದರೆ, ಹರಿಯಾಣದ ಸೂಪರ್ ಸಿಎಂ ನಮ್ಮನ್ನು ಆಳುತ್ತಿದ್ದಾರೆ!. ಅವರು ಈಗ ಮಂತ್ರಿಗಳೊಂದಿಗೆ ಮಾತ್ರವಲ್ಲ, ಸರ್ಕಾರದ ಅಧಿಕಾರಿಗಳೊಂದಿಗೆ ಸಭೆಗಳನ್ನೂ ನಡೆಸುತ್ತಿದ್ದಾರೆ!!. ಕನ್ನಡಿಗ ಹೆಮ್ಮೆಯ ಸ್ವಯಂಘೋಷಿತ ಚಾಂಪಿಯನ್ ಸಿದ್ದರಾಮಯ್ಯನವರು ರಾಜ್ಯದ ಆಡಳಿತವನ್ನು ಸದ್ದಿಲ್ಲದೆ ಹೊರಗುತ್ತಿಗೆ ನೀಡಿದ್ದಾರೆ. ನಮ್ಮ ಹೆಮ್ಮೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.