ನವದೆಹಲಿ,ಜು. 13 (DaijiworldNews/AK): ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ದ್ವೇಷ ಭಾಷಣ ನಿಯಂತ್ರಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.

ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಶರ್ಮಿಷ್ಠ ಪನೋಲಿ ವಿರುದ್ಧದ ಪ್ರಕರಣದ ದೂರುದಾರ ವಜಾಹತ್ ಖಾನ್ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ರೀತಿಯ ಸೂಚನೆ ನೀಡಿದೆ.
ದ್ವೇಷದ ಭಾಷಣವನ್ನು ʻಅಭಿವ್ಯಕ್ತಿ ಸ್ವಾತಂತ್ರ್ಯʼ ಎಂದು ಹೇಳುವುದಕ್ಕೆ ವಿಷಾದ ವ್ಯಕ್ತಪಡಿಸಿದ ನ್ಯಾ. ಬಿ.ವಿ ನಾಗರತ್ನ ಮತ್ತು ನ್ಯಾ. ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ಅದನ್ನ ನಿಯಂತ್ರಿಸಲು ರಾಜ್ಯವು ಮುಂದಾಗುವುದನ್ನು ಯಾರೂ ಬಯಸುವುದಿಲ್ಲ. ಹೀಗಾಗಿ ವಾಕ್ ಸ್ವಾತಂತ್ರ್ಯದ ಮೌಲ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಸಲಹೆ ನೀಡಿತು.
ದ್ವೇಷ ಮೂಡಿಸುವ ಭಾಷಣಗಳು ಅಸಮರ್ಪಕ ಅಂತ ಜನರಿಗೆ ಯಾಕೆ ಕಾಣಿಸುತ್ತಿಲ್ಲ? ಎಂದು ಪ್ರಶ್ನಿಸಿದ ನ್ಯಾಯಪೀಠ, ಇಂತಹ ಕೆಲವು ಭಾಷಣಗಳಿಗೆ ನಿಯಂತ್ರಣ ಇರಬೇಕು. ಜನರು ಅಂತಹ ದ್ವೇಷದ ಭಾಷಣ ಹಂಚಿಕೊಳ್ಳುವುದು ಮತ್ತು ಲೈಕ್ ಮಾಡುವುದನ್ನ ನಿರ್ಬಂಧಿಸಬೇಕು ಎಂದು ಹೇಳಿತು.