ತಿರುವನಂತಪುರಂ, ಜು. 12 (DaijiworldNews/AA): ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಪಕ್ಷ ಕೇರಳದ ಅಭಿವೃದ್ಧಿಗಿಂತ ಕೇಡರ್ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ. ಆದರೆ ಬಿಜೆಪಿ ಕೇಡರ್ಗಿಂತ ವಿಕಸಿತ ಕೇರಳ (ಅಭಿವೃದ್ಧಿ ಹೊಂದಿದ ಕೇರಳ) ಅನ್ನು ಆಯ್ಕೆ ಮಾಡಿತು. ಆದರೆ 2026ರ ಮಾರ್ಚ್ 31ರ ವೇಳೆಗೆ ಭಾರತ ನಕ್ಸಲಿಸಂ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ತಿರುವನಂತಪುರಂದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಬಿಜೆಪಿ ಮತ್ತು ಸಿಪಿಐ(ಎಂ) ಎರಡೂ ಕೇಡರ್ ಆಧಾರಿತ ಪಕ್ಷಗಳಾಗಿವೆ. ಆದರೆ, ಎರಡರ ನಡುವೆ ಭಾರೀ ವ್ಯತ್ಯಾಸವಿದೆ. ಕೇರಳದಲ್ಲಿ ರಾಜ್ಯದ ಅಭಿವೃದ್ಧಿಗಿಂತ ಕೇಡರ್ ಕಲ್ಯಾಣ ಮಹತ್ವದ್ದಾಗಿದೆ. ಆದರೆ ಬಿಜೆಪಿಗೆ ಕೇಡರ್ಗಿಂತ ವಿಕಸಿತ ಕೇರಳ ಮುಖ್ಯ" ಎಂದಿದ್ದಾರೆ.
ಕೇರಳದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ 3 ಪ್ರಮುಖ ದೃಷ್ಟಿಕೋನಗಳನ್ನು ವಿವರಿಸಿದ ಅವರು, "ಎಲ್ಡಿಎಫ್ ಮತ್ತು ಯುಡಿಎಫ್ಗಳ ಸಾಧನೆ ಭ್ರಷ್ಟ ಸರ್ಕಾರವಾಗಿದೆ. ಎಲ್ಡಿಎಫ್ ಸ್ಫೋಟಕ ಹಗರಣ, ಸಹಕಾರಿ ಬ್ಯಾಂಕ್ ಹಗರಣ, ಎಐ ಕ್ಯಾಮೆರಾ ಹಗರಣ, ಲೈಫ್ ಮಿಷನ್ ಹಗರಣ, ಪಿಪಿಇ ಕಿಟ್ ಹಗರಣ ಮತ್ತು ಭಾರತದ ಅತಿದೊಡ್ಡ ಹಗರಣವಾದ ರಾಜ್ಯ ಪ್ರಾಯೋಜಿತ ಚಿನ್ನದ ಕಳ್ಳಸಾಗಣೆ ಹಗರಣವನ್ನು ಮಾಡಿದೆ" ಎಂದು ಕೇರಳದ ಎಲ್ಡಿಎಫ್ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅನ್ನು ಟೀಕಿಸಿದರು.
"ಕಾಂಗ್ರೆಸ್ ಶೀಘ್ರದಲ್ಲೇ ಮುಚ್ಚಲಿರುವ ಪಕ್ಷ. ಬಿಜೆಪಿ ಇಲ್ಲದೆ ವಿಕಸಿತ ಕೇರಳ ಸಾಧ್ಯವಿಲ್ಲ ಎಂದು ನಾನು ಕೇರಳದ ಜನರಿಗೆ ಹೇಳಲು ಬಂದಿದ್ದೇನೆ. ಎಲ್ಡಿಎಫ್ ಅಥವಾ ಯುಡಿಎಫ್ ಎರಡೂ ರಾಜ್ಯದಲ್ಲಿ ನಿಜವಾದ ಬದಲಾವಣೆಯನ್ನು ತರಲು ಸಾಧ್ಯವಿಲ್ಲದ ಕಾರಣ ಕೇರಳ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮತ ಹಾಕಬೇಕು" ಎಂದು ಹೇಳಿದ್ದಾರೆ.