ರಾಜಸ್ಥಾನ, ಜು. 08 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರತಿಷ್ಠಿತ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಾಗಬೇಕು ಎನ್ನುವುದು ಹಲವಾರು ಅಭ್ಯರ್ಥಿಗಳ ಕನಸಾಗಿರುತ್ತದೆ. ಹೀಗೆ ಐಎಎಸ್ ಅಧಿಕಾರಿಯಾಗಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಂಡ ಫರಾಹ್ ಹುಸೇನ್ ಅವರ ಯಶೋಗಾಥೆ ಇದು.

ಐಎಎಸ್ ಫರಾಹ್ ಹುಸೇನ್ ಪರಿಚಯ
ಐಎಎಸ್ ಫರಾಹ್ ಹುಸೇನ್ ರಾಜಸ್ಥಾನದ ಝುಂಝುನೂ ಜಿಲ್ಲೆಯ ನವಾ ಗ್ರಾಮದವರು. ಫರಾಹ್ ಹುಸೇನ್ ಅವರ ತಂದೆ, ಅಶ್ಫಾಕ್ ಹುಸೇನ್, ಸ್ವತಃ ಐಎಎಸ್ ಅಧಿಕಾರಿಯಾಗಿದ್ದರು ಮತ್ತು ಮಾಜಿ ಜಿಲ್ಲಾಧಿಕಾರಿಯಾಗಿದ್ದರು. ಅವರ ಚಿಕ್ಕಪ್ಪ ಲಿಯಾಕತ್ ಖಾನ್, ಐಪಿಎಸ್ ಅಧಿಕಾರಿಯಾಗಿ ಮತ್ತು ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಪತಿ, ಕಮರ್ ಉಲ್ ಜಮಾನ್ ಚೌಧರಿ, ಕೂಡ ಐಎಎಸ್ ಅಧಿಕಾರಿಯಾಗಿದ್ದು, ಜೋಧಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ
2015 ರಲ್ಲಿ, ಎರಡನೇ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದ ಫರಾಹ್ ಹುಸೇನ್ 267 ರ್ಯಾಂಕ್ ಪಡೆದರು. ಯಾವುದೇ ತರಬೇತಿ ಪಡೆಯದೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಫರಾಹ್ ಅವರು ಯಾವುದೇ ತರಬೇತಿ ಪಡೆಯದೇ ಐಎಎಸ್ ಅಧಿಕಾರಿಯಾದ ರಾಜಸ್ಥಾನದ ಎರಡನೇ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಅವರು ಜೋಧಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಧಿಕಾರಿಗಳ ಕುಟುಂಬ
ಫರಾಹ್ ಹುಸೇನ್ ಅಧಿಕಾರಿಗಳ ಕುಟುಂಬದಿಂದ ಬಂದವರು. ಅವರ ಕುಟುಂಬದಲ್ಲಿ ಒಟ್ಟು 14 ಅಧಿಕಾರಿಗಳಿದ್ದು, ಅವರೆಲ್ಲರೂ ಪ್ರತಿಷ್ಠಿತ ಹುದ್ದೆಗಳನ್ನು ಹೊಂದಿದ್ದಾರೆ:
*ಝಾಕಿರ್ ಖಾನ್ (ಐಎಎಸ್) - ಶ್ರೀಗಂಗಾನಗರದ ಕಲೆಕ್ಟರ್
*ಶಾಹೀನ್ ಖಾನ್ (ಆರ್ಎಎಸ್) - ಮುಖ್ಯ ವೈದ್ಯಾಧಿಕಾರಿ, ಈ ಹಿಂದೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಓಎಸ್ಡಿ
*ಮೋನಿಕಾ (ಡಿಐಜಿ, ಜೈಲು) - ಜೈಪುರದಲ್ಲಿ ಜೈಲು ಅಧೀಕ್ಷಕರು
*ಶಕಿಬ್ ಖಾನ್ (ಬ್ರಿಗೇಡಿಯರ್, ಭಾರತೀಯ ಸೇನೆ) - ಪ್ರಸ್ತುತ ಹಿಸಾರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ
*ಸಲೀಮ್ ಖಾನ್ (ಆರ್ಎಎಸ್) - ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ
*ಶಾನಾ ಖಾನ್ (ಆರ್ಎಎಸ್) - ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಅಧಿಕಾರಿ
*ಜಾವೇದ್ ಖಾನ್ (ಆರ್ಎಎಸ್) - ಸಚಿವ ಸಲೇಹ್ ಮೊಹಮ್ಮದ್ ಅವರ ಪಿಎಸ್
*ಇಶ್ರತ್ ಖಾನ್ (ಕರ್ನಲ್, ಭಾರತೀಯ ಸೇನೆ) - 17 ವರ್ಷಗಳ ಹಿಂದೆ ನಿಯೋಜಿತರಾಗಿದ್ದು, ಈಗ ಕರ್ನಲ್
*ಫರಾಹ್ ಖಾನ್ (ಐಆರ್ಎಸ್) - ಮತ್ತೊಬ್ಬ ಸಹೋದರಿ, ಅವರು ಕೂಡ ಯುಪಿಎಸ್ಸಿ ಭೇದಿಸಿ ಐಆರ್ಎಸ್ಗೆ ಸೇರಿದರು.
*ಕಮರ್-ಉಲ್-ಜಮಾನ್ ಚೌಧರಿ (ಐಎಎಸ್) - ಫರಾಹ್ ಅವರ ಪತಿ ಮತ್ತು ಜೆ & ಕೆ ಕೇಡರ್ನ ಸಹ ಐಎಎಸ್ ಅಧಿಕಾರಿ