ಹುಬ್ಬಳ್ಳಿ, ಜೂ. 21 (DaijiworldNews/AA): ಕುದಿಯುವ ಸಾಂಬಾರ್ ಮೈಮೇಲೆ ಬಿದ್ದು ಎರಡೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ಸಂಭವಿಸಿದೆ.

ಹುಬ್ಬಳ್ಳಿ ತಾಲೂಕಿನ ಚೆನ್ನಾಪುರ ಗ್ರಾಮದ ಎರಡೂವರೆ ವರ್ಷದ ರುಕ್ಸಾನಾ ಬಾನು ಶೇಖ್ ಸನದಿ ಮೃತಪಟ್ಟ ಮಗು. ಕಳೆದ ಐದು ದಿನಗಳ ಹಿಂದೆ ಮನೆಯವರೊಂದಿಗೆ ಮದುವೆಗೆಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ತೆರಳಿದ್ದ ವೇಳೆ ಮಗುವಿನ ಮೈಮೇಲೆ ಕುದಿಯುವ ಸಾಂಬಾರ್ ಬಿದ್ದಿತ್ತು.
ತಕ್ಷಣ ಮಗುವನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಎರಡು ದಿನದ ಹಿಂದಷ್ಟೇ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಇಂದು ಮತ್ತೆ ಮಗುವಿನ ಮೈಮೆಲೆ ಗುಳ್ಳೆಗಳು ಎದ್ದಿದ್ದವು. ಹೀಗಾಗಿ ಮತ್ತೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯವ ದಾರಿ ಮಧ್ಯೆಯೇ ಸಾವನ್ನಪ್ಪಿದೆ.