ಅಹಮದಾಬಾದ್, ಜೂ. 14 (DaijiworldNews/AA): ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ನಲ್ಲಿ ಪತನಗೊಂಡ ಘಟನೆ ಸಂಬಂಧ, ವಿಮಾನ ಅಪಘಾತಕ್ಕೂ ಮುನ್ನ ಪೈಲಟ್ ಎಟಿಸಿಗೆ ಕಳುಹಿಸಿದ್ದ ಸಂದೇಶ ಲಭ್ಯವಾಗಿದೆ. ಪೈಲಟ್ ಸುಮಿತ್ ಸಭರ್ವಾಲ್ 'ಮೇಡೇ' ಸಂದೇಶ ಮಾತ್ರವಲ್ಲದೆ ಇನ್ನೂ ಕೆಲವು ವಿಚಾರಗಳನ್ನು ಹೇಳಿದ್ದರು ಎಂಬುದು ಆಡಿಯೋ ಸಂದೇಶದಿಂದ ಬೆಳಕಿಗೆ ಬಂದಿದೆ.

ಸದ್ಯ ಸಿಕ್ಕಿರುವ ಆಡಿಯೋ ಕೇವಲ 5 ಸೆಕೆಂಡ್ಗಳಿದ್ದು, ಪೈಲಟ್ ಸುಮಿತ್ ಸಭರ್ವಾಲ್ ಅವರು ಕೊನೆಯದಾಗಿ, 'ಮೇಡೇ, ಮೇಡೇ, ಮೇಡೇ' ಎಂದು ಸಂದೇಶ ಕಳುಹಿಸಿದ್ದರು. ಜೊತೆಗೆ, 'ಟೇಕಾಫ್ಗೆ ಸಾಕಷ್ಟು ಪ್ರೆಷರ್ ಸಿಗುತ್ತಿಲ್ಲ. ವಿದ್ಯುತ್ ಪೂರೈಕೆ ಕಡಿಮೆಯಾಗುತ್ತಿದೆ, ವಿಮಾನ ಟೇಕ್ ಆಫ್ ಆಗುತ್ತಿಲ್ಲ, ನಾವು ಬದುಕುಳಿಯುವುದಿಲ್ಲ' ಎಂದು ತಿಳಿಸಿದ್ದರು.
ಸಂದೇಶ ದೊರೆತ ನಂತರ ಎಟಿಸಿ ಮಾಡಿದ ಕರೆಗಳಿಗೆ ವಿಮಾನವು ಪ್ರತಿಕ್ರಿಯಿಸಲಿಲ್ಲ. ಕ್ಯಾಪ್ಟನ್ ಎಟಿಸಿಗೆ ಸಂದೇಶ ಕಳುಹಿಸಿದ ಕೆಲವೇ ಕ್ಷಣಗಳಲ್ಲೇ ಏರ್ ಇಂಡಿಯಾ ವಿಮಾನ ಪತನವಾಗಿತ್ತು.