ಗುಜರಾತ್, ಜೂ. 12 (DaijiworldNews/TA): ಏರ್ ಇಂಡಿಯಾದ ಬೋಯಿಂಗ್ ಡ್ರೀಮ್ಲೈನ್ 787 ಪ್ರಯಾಣಿಕ ವಿಮಾನ ಗುರುವಾರ ಮಧ್ಯಾಹ್ನ ಗುಜರಾತ್ನ ಅಹಮದಾಬಾದ್ನಲ್ಲಿ ಪತನಗೊಂಡಿದೆ. ಅದರ ಭಯಾನಕ ಚಿತ್ರಗಳು ಹೊರಬರುತ್ತಿವೆ. ಈ ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಈ ಡ್ರೀಮ್ಲೈನರ್ ಬೋಯಿಂಗ್ 787 ವಿಮಾನವು ಲಂಡನ್ಗೆ ಪಯಣ ಬೆಳೆಸಿತ್ತು ಎನ್ನಲಾಗಿದೆ. ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವಾಗ ಹತ್ತಿರದ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಯಿತು ಎಂದು ವರದಿಯಾಗಿದೆ.
ವಿಮಾನ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ವಿಮಾನದ ಹೆಚ್ಚಿನ ಭಾಗಗಳು ಸುಟ್ಟು ಬೂದಿಯಾಗಿವೆ. ವಿಮಾನ ಬಿದ್ದ ಕಟ್ಟಡಕ್ಕೂ ಹಾನಿಯಾಗಿದೆ. ವಿಮಾನ ನಿಲ್ದಾಣದ ಬಳಿ ಸಿವಿಲ್ ಆಸ್ಪತ್ರೆ ಇದ್ದು, ಅಲ್ಲಿ ಎಲ್ಲಾ ವೈದ್ಯರ ರಜೆ ರದ್ದುಪಡಿಸಲಾಗಿದೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಅಹಮದಾಬಾದ್ನಿಂದ ಹೊರಟ ಈ ವಿಮಾನ ಲಂಡನ್ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.