ಬೆಂಗಳೂರು, ಮೇ. 24 (DaijiworldNews/AA): ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ರ ಫಲಿತಾಂಶ ಪ್ರಕಟಿಸಿದರು.

ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ಸಲ್ಲಿಸಿದವರ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2,75,677 ವಿದ್ಯಾರ್ಥಿಗಳು ಸಿಇಟಿ ರ್ಯಾಂಕ್ ಪಡೆದಿದ್ದಾರೆ. ಈ ವರ್ಷ ಪರೀಕ್ಷಾ ಸುಧಾರಣೆ ಮಾಡಿದ್ದೆವು. ಪರೀಕ್ಷಾ ಕೇಂದ್ರದಲ್ಲಿ ಫೇಸ್ ರೀಡಿಂಗ್ ತಂತ್ರಜ್ಞಾನ ಮಾಡಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಿದ್ದೇವೆ ಎಂದು ತಿಳಿಸಿದರು.
ಮೊದಲ ಬಾರಿಗೆ ಎಲ್ಲಾ ಓಎಂಆರ್ ಶೀಟ್ ಪಬ್ಲಿಕ್ ಡೋಮೈನ್ಗೆ ಹಾಕಲಾಗಿದೆ. ಆನ್ ಲೈನ್ ಮೂಲಕ ದಾಖಲಾತಿ ಪರಿಶೀಲನೆ ವ್ಯವಸ್ಥೆ ಆಗಿದ್ದು ಆಪ್ಶನ್ ಎಂಟ್ರಿಗೆ ಸಿದ್ದತೆ ಮಾಡಿದ್ದೇವೆ. ನೀಟ್ ಫಲಿತಾಂಶ ಬಂದ ಕೂಡಲೇ ಪ್ರಕ್ರಿಯೆ ಶುರುವಾಗಲಿದೆ. ವಾರದ 7 ದಿನವೂ ಸಹಾಯವಾಣಿ ಬೆಳಗ್ಗೆ 8 ರಿಂದ 8 ರಾತ್ರಿ ಗಂಟೆವರೆಗೂ ಇರಲಿದೆ ಎಂದು ಮಾಹಿತಿ ನೀಡಿದರು.
ಇಂಜಿನಿಯರಿಂಗ್ ವಿಭಾಗ
ಪ್ರಥಮ-ಭವೇಶ್ ಜಯಂತಿ, ಚೈತನ್ಯ ಟೆಕ್ನೋ ಮಾರತ್ ಹಳ್ಳಿ.
ದ್ವಿತೀಯ- ಸಾತ್ವಿಕ್ ಬಿರಾದರ್, ಚೈತನ್ಯ ಟೆಕ್ನೊ ಉತ್ತರಹಳ್ಳಿ
ತೃತೀಯ- ದಿನೇಶ್ ಗೋಮತಿ, ಚೈತನ್ಯ ಟೆಕ್ನೋ ಮಾರತ್ ಹಳ್ಳಿ.
ವೆಟರ್ನರಿ ವಿಭಾಗ
ಪ್ರಥಮ- ಹರೀಶ್ ರಾಜ್, ನಾರಾಯಣ ಇ ಟೆಕ್ನೋ, ದೊಡ್ಡ ಬೆಟ್ಟಹಳ್ಳಿ
ದ್ವಿತೀಯ- ಆತ್ರೇಯ ವೆಂಕಟಾಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್
ತೃತೀಯ- ಸಪಲ್ ಎಸ್ ಶೆಟ್ಟಿ- ಎಕ್ಸ್ ಪರ್ಟ್ ಪಿಯು ಕಾಲೇಜ್ ಮಂಗಳೂರು
ಅಗ್ರಿಕಲ್ಚರ್ ವಿಭಾಗ
ಪ್ರಥಮ- ಅಕ್ಷಯ್ M ಹೆಗ್ಡೆ, ಆಳ್ವಾಸ್ ಪಿಯು ಕಾಲೇಜ್, ಮೂಡಬಿದಿರೆ
ದ್ವಿತೀಯ- ಸಾಯಿಶ್ ಶ್ರವಣ್ ಪಂಡಿತ್, ಎಕ್ಸ್ ಪರ್ಟ್ ಪಿಯು ಕಾಲೇಜ್ ಮಂಗಳೂರು
ತೃತೀಯ- ಸುಚಿತ್ ಪಿ ಪ್ರಸಾದ್, ಎಕ್ಸ್ ಪರ್ಟ್ ಪಿಯು ಕಾಲೇಜು, ಮಂಗಳೂರು
BNYS ವಿಭಾಗ
ಪ್ರಥಮ- ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ, ಬೆಂಗಳೂರು
ದ್ವಿತೀಯ- ಆತ್ರೇಯ ವೆಂಕಟಾಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್, ಬೆಂಗಳೂರು
ತೃತೀಯ- ಸಫಲ್ ಎಸ್ ಶೆಟ್ಟಿ, ಎಕ್ಸ್ ಪರ್ಟ್ ಪಿಯು ಕಾಲೇಜು, ಮಂಗಳೂರು.
ನರ್ಸಿಂಗ್ ವಿಭಾಗ
ಪ್ರಥಮ- ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ, ಬೆಂಗಳೂರು
ದ್ವಿತೀಯ- ಆತ್ರೇಯ ವೆಂಕಟಾಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್ ಬೆಂಗಳೂರು
ತೃತೀಯ- ಸಫಲ್ ಎಸ್ ಶೆಟ್ಟಿ, ಎಕ್ಸ್ ಪರ್ಟ್ ಪಿಯು ಕಾಲೇಜು, ಮಂಗಳೂರು.
ಬಿ ಫಾರ್ಮ್
ಪ್ರಥಮ- ಆತ್ರೇಯ ವೆಂಕಟಾಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್ ಬೆಂಗಳೂರು
ದ್ವಿತೀಯ- ಭವೇಶ್ ಜಯಂತಿ, ಚೈತನ್ಯ ಟೆಕ್ನೊ, ಮಾರತ್ ಹಳ್ಳಿ. ಬೆಂಗಳೂರು
ತೃತೀಯ- ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ, ಬೆಂಗಳೂರು
ವೆಟರ್ನರಿ ಪ್ರಾಕ್ಟಿಕಲ್ ವಿಭಾಗ
ಪ್ರಥಮ- ರಕ್ಷಿತಾ, HMR ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಯಾಣ ನಗರ, ಬೆಂಗಳೂರು
ದ್ವಿತೀಯ- ನಂದನ್ ಟಿ.ಎಸ್, RK ವಿಷನ್ ಪಿಯು ಕಾಲೇಜ್, ಚಿಕ್ಕಬಳ್ಳಾಪುರ
ತೃತೀಯ- ಭುವನೇಶ್ವರಿ, ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜು, ರಾಯಚೂರು
ಅಗ್ರಿಕಲ್ಚರ್ ಪ್ರಾಕ್ಟಿಕಲ್ ವಿಭಾಗ
ಪ್ರಥಮ- ಕೀರ್ತನಾ, ಶಾರದಾಂಬ ಪಿಯು ಕಾಲೇಜು, ತುಮಕೂರು
ದ್ವಿತೀಯ- ರಕ್ಷಿತಾ, HMR ನ್ಯಾಷನಲ್ ಪಿಯು ಕಾಲೇಜ್, ಕಲ್ಯಾಣ ನಗರ, ಬೆಂಗಳೂರು
ತೃತೀಯ- ಅಶ್ವಿನಿ ಯಕ್ಕುಂಡಿ, ಎಕ್ಸಲೆನ್ಸ್ ಸೈನ್ಸ್ ಪಿಯು ಕಾಲೇಜ್, ವಿಜಯಪುರ