ನವದೆಹಲಿ, ಮೇ. 09 (DaijiworldNews/AA): ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 19 ಸಾವಿರ ಕೋಟಿ ರೂ. ಸಾಲವನ್ನು ಮಂಜೂರು ಮಾಡಿದೆ.

ಭಾರತದ ಮನವಿಯನ್ನು ಧಿಕ್ಕರಿಸಿ ಐಎಂಎಫ್ ಪಾಕ್ಗೆ ಸಾಲ ನೀಡುತ್ತಿದ್ದು, 2 ಪ್ಯಾಕೇಜ್ನಲ್ಲಿ ಐಎಂಎಫ್ನಿಂದ ಹಣ ಮಂಜೂರು ಮಾಡಲಾಗಿದೆ. ಐಎಂಎಫ್ ಕಾರ್ಯಕಾರಿ ಮಂಡಳಿಯು ತನ್ನ ವಿಸ್ತೃತ ನಿಧಿ ಸೌಲಭ್ಯ (ಇಎಫ್ಎಫ್) ಅಡಿಯಲ್ಲಿ ಪಾಕ್ಗೆ 1 ಬಿಲಿಯನ್ ಡಾಲರ್ಗಳ ಎರಡನೇ ಸಾಲದ ಕಂತನ್ನು ವಿತರಿಸಲು ಅನುಮೋದನೆ ನೀಡಿದೆ.
ಪುನರಾವರ್ತಿತ ಆರ್ಥಿಕ ಬಿಕ್ಕಟ್ಟುಗಳು ಮತ್ತು ಹಿಂದಿನ ಐಎಂಎಫ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಕಳಪೆ ದಾಖಲೆಯಿಂದ ಗುರುತಿಸಲ್ಪಟ್ಟ ಇಎಫ್ಎಫ್ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನದ ಪ್ರಗತಿಯನ್ನು ಐಎಂಎಫ್ ಪರಿಶೀಲಿಸಿದ ನಂತರ ಸಾಲದ ಕಂತನ್ನು ವಿತರಿಸುವ ಈ ಅನುಮೋದನೆ ನೀಡಲಾಗಿದೆ.
ಈ ಸಂದರ್ಭ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗೆ ಹಣಕಾಸು ಒದಗಿಸಲು ದುರುಪಯೋಗಪಡಿಸಿಕೊಳ್ಳಬಹುದು ಎಂದು ಭಾರತ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಪಾಕ್ಗೆ ಸಾಲ ನೀಡುವ ಸಂಬಂಧ ಮತದಾನದಿಂದ ಭಾರತ ದೂರ ಉಳಿಯಿತು.