ಬೆಂಗಳೂರು,ಏ.08(DaijiworldNews/TA) : ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2025 ರ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ 93.90 ಶೇ ಪಡೆದು ಪ್ರಥಮ ಸ್ಥಾನ ಗಳಿಸಿಕೊಂಡರೆ, 93.57 ಶೇ ಫಲಿತಾಂಶದೊಂದಿಗೆ ದ.ಕ 2ನೇ ಸ್ಥಾನ ಪಡೆದುಕೊಂಡಿದೆ. 48.45% ಫಲಿತಾಂಶ ಪಡೆದು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನಗಳಿಸಿದೆ.

ಕಲಾ ವಿಭಾಗದಲ್ಲಿ ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡರೆ, ವಿಜ್ಞಾನ ವಿಭಾಗದಲ್ಲಿ, ದಕ್ಷಿಣ ಕನ್ನಡದ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.
ಜಿಲ್ಲೆಗಳ ಶೇಕಡಾವಾರು ಉತ್ತೀರ್ಣ ಫಲಿತಾಂಶ: ಮೊದಲ ಸ್ಥಾನ ಉಡುಪಿ ಜಿಲ್ಲೆ ; 93.90, ಎರಡನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ; 93.57, ಮೂರನೇ ಸ್ಥಾನ ಬೆಂಗಳೂರು ದಕ್ಷಿಣ ; 85.36, ನಾಲ್ಕನೇ ಸ್ಥಾನ ಕೊಡಗು; 83.84, ಐದನೇ ಸ್ಥಾನ ಬೆಂಗಳೂರು ಉತ್ತರ; 83.31, ಆರನೇ ಸ್ಥಾನ ಉತ್ತರ ಕನ್ನಡ ; 82.93 , ಏಳನೇ ಸ್ಥಾನ ಶಿವಮೊಗ್ಗ ; 79.91, ಎಂಟನೇ ಸ್ಥಾನ ಬೆಂಗಳೂರು ಗ್ರಾಮಾಂತರ ; 79.70 , ಒಂಭತ್ತನೇ ಸ್ಥಾನ ಚಿಕ್ಕಮಗಳೂರು; 79.56, ಹತ್ತನೇ ಸ್ಥಾನ ಹಾಸನ; 77.56, ಕೊನೆ ಸ್ಥಾನ ಯಾದಗಿರಿ ; 48.45
ಶೇಕಡಾ 100 ರಷ್ಟು ಫಲಿತಾಂಶ ಪಡೆದ 13 ಸರ್ಕಾರಿ ಪದವಿ ಪೂರ್ವ ಕಾಲೇಜು : ಒಟ್ಟು 134 ಶಾಲೆಗಳಲ್ಲಿ ಶೇಕಾಡ 100 ರಷ್ಟು ಫಲಿತಾಂಶ, ಒಟ್ಟು 123 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ.