ಬೆಂಗಳೂರು, ಏ.04 (DaijiworldNews/AA): ವಿನಯ್ ಸೋಮಯ್ಯ ಸಾವಿಗೆ ನ್ಯಾಯ ಸಿಗೋವರೆಗೆ ಹೋರಾಟ ಮಾಡಲಾಗುತ್ತದೆ. ಶಾಸಕರ ವಿರುದ್ಧ ಎಫ್ಐಅರ್ ದಾಖಲಾಗಬೇಕು ಎಂದು ವಿಪಕ್ಷ ನಾಯಕ ಅರ್ ಅಶೋಕ್ ತಿಳಿಸಿದ್ದಾರೆ.

ನಗರದಲ್ಲಿಂದು ಮಾತಾಡಿದ ಅವರು, ಇಬ್ಬರು ಶಾಸಕರು, ಶಾಸಕನ ಆಪ್ತ ತನ್ನೆರಾ ಮಹೀನ್ ಮತ್ತು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಸಾವಿಗೆ ಕಾರಣ ಡೆತ್ ನೋಟ್ನಲ್ಲಿ ವಿನಯ್ ಬರೆದಿದ್ದಾರೆ. ವಿನಯ್ ಮತ್ತು ಅವರ ಪತ್ನಿ-ಇಬ್ಬರೂ ವಿದ್ಯಾವಂತರು, ಕೊಡಗಿನ ಎಸ್ಪಿ ಬೆಂಗಳೂರುವರೆಗೆ ಬಂದು ವಿನಯ್ಗೆ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಿದರು.
ಸುಮಾರು ಎರಡು ತಿಂಗಳು ಹಿಂದೆ ವಿನಯ್ ಅವರು ಅಭಿವೃದ್ಧಿ ಕಾಮಗಾರಿಯೊಂದನ್ನು ಸೋಶಿಯಲ್ ಮೀಡಿಯದಲ್ಲಿ ಅಪ್ಲೋಡ್ ಮಾಡಿದಾಗಿನಿಂದ ಶಾಸಕ, ಶಾಸಕನ ಆಪ್ತ ಮತ್ತು ಎಸ್ ಪಿ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದರು.