ಬೆಂಗಳೂರು,ಮೇ26(DaijiworldNews/AZM):ಕಾರಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ಇಂದು ಮುಂಜಾನೆ ನಡೆದಿದೆ.

ಮೃತಪಟ್ಟವರನ್ನು ಸುಜಯ್, ದೀಪಂಕರ್ ಡೇ (46), ಸಾಗತ್ ಚೌಧರಿ (43), ಸುಜಯ (46), ಜಯಂತಿ (65), ಧೃವಡೇ (14) ಎಂದು ಗುರುತಿಸಲಾಗಿದೆ. ಧೃವಡೇ ಎಂಬ ಬಾಲಕನಿಗೂ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲುಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತನು ಮೃತಪಟ್ಟಿದ್ದಾನೆ.
ಕೋಗಿಲು ಕ್ರಾಸ್ ಅಪಘಾತ ನಡೆದಿದೆ. ಆಂಬುಲೆನ್ಸ್ಅನ್ನು ಚಾಲಕ ವೇಗವಾಗಿ ಓಡಿಸಿಕೊಂಡು ಬರುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಚಾಲಕ ವೇಗವಾಗಿದ್ದರಿಂದ ವಾಹನ ಡಿಕ್ಕಿ ಹೊಡೆದರೂ ನಿಲ್ಲದೆ ಮುನ್ನುಗ್ಗಿದೆ. ಈ ವೇಳೆ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದಿದೆ.ಇದನ್ನು ಕಾರು ಚಾಲಕ ನಿರೀಕ್ಷಿಸಿರಲಿಲ್ಲ. ಹಾಗಾಗಿ ಆತನಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ಇರಲಿಲ್ಲ. ಆಂಬುಲೆನ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.