ಉಡುಪಿ, ಮೇ15(Daijiworld News/SS): ಇಲ್ಲಿನ ಕಾಪುವಿನ ಮೂಳೂರಿನಲ್ಲಿರುವ ಸಾಯಿ ರಾಧ ರೆಸಾರ್ಟ್ನಲ್ಲಿ ಕಳೆದ ಒಂದು ವಾರದಿಂದ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಜೆಡಿಎಸ್ ವರಿಷ್ಠ ದೇವೇಗೌಡರು ಚಿಕಿತ್ಸೆ ಪೂರ್ಣಗೊಳಿಸಿ ಶೃಂಗೇರಿಯತ್ತ ತೆರಳಿದ್ದಾರೆ.

ಆಯುರ್ವೇದ ತಜ್ಞ ತನ್ಮಯ ಗೋಸ್ವಾಮಿ ಅವರು ದೇವೇಗೌಡರಿಗೆ ಪಂಚಕರ್ಮ ಸಹಿತ ಮಣಿಗಂಟು ನೋವಿಗೆ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿದ್ದು, ಗೌಡರು ವಾಪಾಸಾಗಿದ್ದಾರೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
ರೆಸಾರ್ಟ್ನಿಂದ ಹಿಂದಿರುಗುವ ವೇಳೆ ದೇವೇಗೌಡರಿಗೆ ರೆಸಾರ್ಟ್ನ ಸಿಬ್ಬಂದಿಗಳು ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದ್ದಾರೆ. ಇದೀಗ ಚಿಕಿತ್ಸೆ ಪೂರ್ಣಗೊಳಿಸಿರುವ ದೇವೇಗೌಡರು ಪತ್ನಿ ಚನ್ನಮ್ಮ ಅವರೊಟ್ಟಿಗೆ ಶೃಂಗೇರಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.