ಸುಳ್ಯ, ಏ 18(Daijiworld News/SM):ಬೈಕ್-ಟ್ರಾಕ್ಟರ್ ನಡುವಿನ ಭೀಕರ ಅಪಘಾತವೊಂದರಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿನ ಕಳಂಜದ ವಿಷ್ಣುನಗರದಲ್ಲಿ ನಡೆದಿದೆ. ಮೋಯಿನುದ್ದೀನ್ ಅನ್ವರ್(21) ಮೃತ ಬೈಕ್ ಸವಾರ.

ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನಿಂದ 10 ದಿನ ಮುಂಚಿತವಾಗಿ ಅನ್ವರ್ ಊರಿಗೆ ಬಂದಿದ್ದರು. ಇಳಿಜಾರು ಪ್ರದೇಶದಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದ ವೇಳೆ, ನಿಯಂತ್ರಣ ಕಳೆದುಕೊಂಡು ಟ್ರಾಕ್ಟರ್ಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ತೀವ್ರತೆಯ ಪರಿಣಾಮ ಬೈಕ್ ಸವಾರ ರಸ್ತೆಯ ಮೇಲೆ ಎಸೆಯಲ್ಪಟ್ಟು, ತೀವ್ರ ಗಾಯಗೊಂಡಿದ್ದ. ತಕ್ಷಣ ಪುತ್ತೂರಿನ ಸರಕಾರಿ ಆಸ್ಪತ್ರಗೆ ಕೊಂಡೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ಟ್ರಾಕ್ಟರ್ ಚಾಲಕ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.