ಬಂಟ್ವಾಳ, ಡಿ 12 (DaijiworldNews/AK): ದನಗಳನ್ನು ಕಳವು ಮಾಡಿ ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ತುಂಬಿಸಿ ಕೊಲ್ಲಲು ಕೊಂಡು ಹೋಗುವ ವೇಳೆ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್ .ಐ.ರಾಮಕೃಷ್ಣ ನೇತೃತ್ವದ ತಂಡ ದನಗಳನ್ನುರಕ್ಷಣೆ ಮಾಡಿದ್ದು, ಆರೋಪಿಗಳು ಪರಾರಿಯಾದ ಘಟನೆ ಲೊರೆಟ್ಟುಪದವು ಸಮೀಪದ ಟಿಪ್ಪು ನಗರ ಬಳಿ ನಡೆದಿದೆ.

ಓಮ್ನಿ ಕಾರಿನಲ್ಲಿ ಐದು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೈ ಕಾಲು ಕಟ್ಟಿ ತುಂಬಿಸಲಾಗಿತ್ತು.ಜಾಬೀರ್ ಮತ್ತು ನಾಸೀರ್ ಎಂಬವರು ಕಾರು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
 
ಎಸ್. ಐ.ರಾಮಕೃಷ್ಣ ಅವರು ರೌಂಡ್ಸ್ ನಲ್ಲಿದ್ದ ವೇಳೆ ಓಮ್ನಿ ಕಾರೊಂದರ ಮೇಲೆ ಸಂಶಯಗೊಂಡು ಬೆನ್ನು ಬಿದ್ದಾಗ ಅತೀ ವೇಗದೊಂದಿಗೆ ಕಾರು ಹೋಗುವುದು ಕಂಡು ಬಂತು.ಈ ಹಿನ್ನಲೆ ಲೊರೆಟ್ಟೊಪದವಿನಿಂದ ಬೆನ್ನಟ್ಟಿದಾಗ ಕಾರು ಟಿಪ್ಪುನಗರ ಕಡೆಗೆ ಹೋಗಿ ಕಾರನ್ನು ಅಲ್ಲೇ ಬಿಟ್ಟು ಚಾಲಕ ಮತ್ತು ಕಾರಿನಲ್ಲಿದ್ದ ಇನ್ನೋರ್ವ ಪರಾರಿಯಾಗಿದ್ದಾರೆ.
 
 ಆರೋಪಿಗಳ ಬಗ್ಗೆ ಪೋಲೀಸರಿಗೆ ಮಾಹಿತಿ ಸಿಕ್ಕಿದ್ದು,ಇಬ್ಬರು ಕೂಡ ಈ ಹಿಂದೆ ದನ ಕಳವು ಪ್ರಕರಣದ ಪ್ರಮುಖ ಆರೋಪಿಗಳೆಂದು ತಿಳಿದು ಬಂದಿದೆ. 
ವಶಪಡಿಸಿಕೊಂಡ ವಾಹನ ಹಾಗೂ ಐದು ದನಗಳು ಠಾಣೆಯಲ್ಲಿ ಇದ್ದು, ನ್ಯಾಯಾಲಯದ ಅದೇಶ ಪಡೆದುಕೊಂಡು ಗೋ ಶಾಲೆಗೆ ಕಳುಹಿಸಿ ಕೊಡಲಾಗುವುದು.
ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.