ಮಲ್ಪೆ, ನ 12 (DaijiworldNews/HR): ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದಿದೆ.




ಹತ್ಯೆಯಾದವರನ್ನು ತಾಯಿ ಹಸೀನಾ(46), ಅಫ್ನಾನ್ (23), ಅಯ್ನಾಝ್ (21), ಆಸೀಮ್ (12) ಎಂದು ಗುರುತಿಸಲಾಗಿದೆ.
ಮನೆಯೊಳಗಿದ್ದ ಮತ್ತೋರ್ವ ವ್ಯಕ್ತಿ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿ ಬಂದು ಏಕಾಏಕಿ ಮನೆಗೆ ನುಗ್ಗಿ ಮಾತಿನ ಚಕಮಕಿ ನಡೆದಿದ್ದು, ಮೊದಲು ಮಹಿಳೆ ಹಾಗೂ ಮಕ್ಕಳಾದ ಹಸಿನಾ, ಅಫ್ನಾನ್, ಅಯ್ನಾಝ್ ಮೊದಲು ದುಷ್ಕರ್ಮಿಗಳು ಇರಿದಿದ್ದು, ಸದ್ದು ಕೇಳಿ ಆಟವಾಡುತ್ತಿದ್ದ ಆಸೀಮ್ ಒಳ ಬರುತ್ತಿದ್ದಂತೆ ದುಷ್ಕರ್ಮಿ ಇರಿದು ಕೊಂದಿದ್ದಾನೆ.
ಇನ್ನು ಬೊಬ್ಬೆ ಕೇಳಿ ಪಕ್ಕದ ಮನೆ ಯುವತಿ ಹೊರಗಡೆ ಬಂದಿದ್ದು, ಆಕೆಯನ್ನೂ ಬೆದರಿಸಿ ಸ್ಥಳದಿಂದ ದುಷ್ಕರ್ಮಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳ ಸಹಿತ, ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಐದು ತಂಡ ರಚಿಸಿದ ಎಸ್ಪಿ
ಹತ್ಯೆಯ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲು ಐದು ತಂಡಗಳನ್ನು ರಚಿಸಲಾಗಿದೆ ಮತ್ತು ಆದಷ್ಟು ಬೇಗ ಆರೋಪಿಗಳನ್ನು ಪತ್ತೆಹಚ್ಚವುದಾಗಿ ಎಸ್ಪಿ ಅರುಣ್ ಕುಮಾರ್ ತಿಳಿಸಿದ್ದಾರೆ.
ತನಿಖೆಯಲ್ಲಿ ಪ್ರಗತಿ ಕಂಡುಬಂದ ನಂತರ ನಾನು ಮಾಹಿತಿ ನೀಡುತ್ತೇನೆ" ಎಂದು ಅವರು ಹೇಳಿದರು.
ಈ ನಡುವೆ ಮೃತದೇಹಗಳನ್ನು ಕೆಎಂಸಿ ಶವಾಗಾರಕ್ಕೆ ರವಾನಿಸಲಾಗಿದೆ. ಮೃತ ಹಸೀನಾ ಅವರ ಬದುಕುಳಿದಿರುವ ಮಗ ಸಂಜೆ ಮಣಿಪಾಲಕ್ಕೆ ಆಗಮಿಸಿದ್ದಾನೆ ಎಂದು ವರದಿಯಾಗಿದೆ.
ನ.13ರಂದು ಬೆಳಗ್ಗೆ ವಿದೇಶದಿಂದ ಕುಟುಂಬದ ಮುಖ್ಯಸ್ಥರು ಆಗಮಿಸಿದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.