ಮಲ್ಪೆ, ಮಾ 02(AZM):ಮಲ್ಪೆ ಬೀಚ್ ನಲ್ಲಿ ಬಾಂಬ್ ಸ್ಪೋಟ ಮಾಡುತ್ತೇವೆ ಎನ್ನುವ ಬೆದರಿಕೆಯೊಡ್ಡಿರುವ ವೀಡಿಯೋದ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನೊಬ್ಬ ಈ ವೀಡಿಯೋದಲ್ಲಿ ಬೆದರಿಕೆಯೊಡ್ಡಿದ್ದಾನೆ.

1 ನಿಮಿಷ 24 ಸೆಕೆಂಡುಗಳ ವೀಡಿಯೋ ದೃಶ್ಯದಲ್ಲಿ ಯುವಕ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಿಂದಿಯಲ್ಲಿ ಬೆದರಿಕೆಯೊಡ್ಡಿದ್ದಾನೆ. ವೀಡಿಯೋದ ಆರಂಭದಲ್ಲಿ ಪಾಕಿಸ್ತಾನಕ್ಕೆ ಜಯಕಾರ ಕೂಗಿರುವ ಯುವಕ, ನಮ್ಮ ಮುಂದಿನ ಟಾರ್ಗೆಟ್ ಮಲ್ಪೆ ಬೀಚ್ ಎಂದು ಹೇಳಿದ್ದಾನೆ. ಇನ್ನು ಅಲ್ಲಿನ ಜನ ತುಂಬಾ ಕೆಟ್ಟವರಾಗಿದ್ದು, ಅಲ್ಲಿ ತುಂಬಾ ದೊಡ್ಡ ಮಟ್ಟದ ಬಾಂಬ್ ಸ್ಫೋಟಿಸಿ ಎಲ್ಲರನ್ನು ಮುಗಿಸುತ್ತೇವೆ ಎಂದಿದ್ದಾನೆ. ಈ ವೀಡಿಯೋ ಇದೀಗ ಗ್ರೂಪ್ ನಿಂದ ಗ್ರೂಪ್ ಗೆ ಹರಿದಾಡುತ್ತಿದ್ದು, ಮಾ.೩ರಂದು ಮಲ್ಪೆಯಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದ ಹಿನ್ನಲೆ ಆತಂಕ ಸೃಷ್ಟಿಯಾಗಿದೆ.
ಪೊಲೀಸರು ಇದೀಗ ಈ ವೀಡಿಯೋವನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.