ಮಂಗಳೂರು,ಸೆ.11 (MSP): ತೂಫಾನ್ ವಾಹನದ ಚಾಲಕರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದು ಓರ್ವ ಗಾಯಗೊಂಡ ಘಟನೆ ಕಡಬದಲ್ಲಿ ಸೆ.11 ಮಂಗಳವಾರ ನಡೆದಿದೆ.ಘಟನೆಯಲ್ಲಿ ಚಾಲಕನ ಜಬ್ಬಾರ್ ಎಂಬಾತ ಗಾಯಗೊಂಡಿದ್ದಾನೆ.
.jpg)
.jpg)
.jpg)
.jpg)
.jpg)
.jpg)
.jpg)
ಜಬ್ಬಾರ್ ಹಾಗೂ ಅಬ್ದುಲ್ ರಹಿಮಾನ್ ನಡುವೆ ಕಡಬ - ಉಪ್ಪಿನಂಗಡಿಯ ಮದ್ಯೆ ಬಾಡಿಗೆ ಕ್ಯೂ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಮಾತಿಗೆ ಮಾತು ಬೆಳೆದಿದೆ. ಬಳಿಕ ಪರಿಸ್ಥಿತಿ ಕೈ - ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಕೋಪಕೊಂಡ ಚಾಲಕರಿಬ್ಬರು ವಾಹನದಿಂದ ಚೈನನ್ನು ತೆಗೆದುಕೊಂಡು ಬಂದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜಬ್ಬಾರ್ ನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಅಬ್ದುಲ್ ರಹಿಮಾನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.