ಕಾರ್ಕಳ, ಫೆ.05 (DaijiworldNews/PY): ಬೈಕ್ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸಹಸವಾರರೊಬ್ಬರು ಗಾಯಗೊಂಡಿರುವ ಘಟನೆ ಮಿಯ್ಯಾರಿನ ಬಿ.ಸಿ.ರೋಡ್ನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಮೋನಪ್ಪ ಗೌಡ ಘಟನೆಯಲ್ಲಿ ಗಾಯಾಳು. ಮಾಳ ಪೇರಡ್ಕದ ನಿವಾಸಿಯಾಗಿರುವ ಗುರುಪ್ರಸಾದ್ ಎನ್ನುವವರು ಈ ಕುರಿತು ನಗರ ಠಾಣೆಗೆ ದೂರು ನೀಡಿದ್ದಾರೆ.
ಫೆಬ್ರವರಿ 4ರಂದು ಬೆಳಿಗ್ಗೆ 9.00 ಗಂಟೆಗೆಯ ವೇಳೆಗೆ ಮೋನಪ್ಪ ಗೌಡ ಅವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿ ಬಜಗೋಳಿಯಿಂದ ಕಾರ್ಕಳದ ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಅದೇ ವೇಳೆಗೆ ಪುಲ್ಕೇರಿ ಯಿಂದ ಬಜಗೋಳಿ ಕಡೆಗೆ ಬರುತ್ತಿದ್ದ ಮತ್ತೊಂದು ಬೈಕ್ ಯಾವುದೇ ಸೂಚನೆ ನೀಡದೇ, ವೇಗವಾಗಿ ಮಿಯ್ಯಾರು ಬಿ.ಸಿ ರೋಡ್ ಎಂಬಲ್ಲಿ ರಸ್ತೆ ಅಡ್ಡವಾಗಿ ತಿರುಗಿಸಿರುವುದೇ ಘಟನೆಗೆ ಕಾರಣವೆನ್ನಲಾಗಿದೆ.
ಆ ಸಂದರ್ಭದಲ್ಲಿ ಸಹಸವಾರ ಮೋನಪ್ಪ ಗೌಡ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.