ಮಂಗಳೂರು, ಎ.12 (Daijiworld News/MB) : ನಗರದ ಹೊರವಲಯದ ಮಲ್ಲೂರಿನ ಉದ್ದಬೆಟ್ಟುವಿನಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರು ಎಸ್ಡಿಪಿಐ ಕಾರ್ಯಕರ್ತರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಮಲ್ಲೂರು ಬದ್ರಿಯಾ ನಿವಾಸಿಗಳಾದ ಇಸ್ಮಾಯಿಲ್ (45) ಹಾಗೂ ಅಶ್ರಫ್ (32).
ಆಶಾಕಾರ್ಯಕರ್ತೆ ವಸಂತಿ ಎಂಬವರು ಮನೆಮನೆಗೆ ತೆರಳಿ ಸರ್ವೇ ಮಾಡುವ ಕರ್ತವ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಇಬ್ಬರು ಆಕೆಯ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಸಂತಿ ಅವರು ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.