ಉಡುಪಿ, ಮಾ 30 (DaijiworldNews/SM): ರವಿವಾರ ಎರಡು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದ ಉಡುಪಿಯಲ್ಲಿ ಸೋಮವಾರದಂದು ಎಲ್ಲವೂ ನೆಗೆಟಿವ್ ಪ್ರಕರಣಗಳೇ ದಾಖಲಾಗಿದೆ. ಆ ಮೂಲಕ ಉಡುಪಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಲ್ಲಿಯ ತನಕ 3 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ನಿಗಾ ವಹಿಸಲಾಗಿದೆ.
ಸೋಮವಾರದಂದು ಲಭಿಸಿದ ವರದಿಯ ವಿವರ:
2309 ಮಂದಿ  - ಕೊರೊನಾ ತಪಾಸಣೆಗೆ ಒಳಪಡಿಸಿದವರು
314 ಮಂದಿ    - ಮನೆಯಲ್ಲಿ ನಿಗಾದಲ್ಲಿರುವವರು 
1072 ಮಂದಿ  - ಹದಿನಾಲ್ಕು ದಿನಗಳ ಮನೆ ನಿಗಾ ಪೂರೈಕೆ
127 ಮಂದಿ    - 28 ದಿನಗಳ ಮನೆ ನಿಗಾ ಪೂರೈಸಿದವರು
140 ಮಂದಿ    - ತಪಾಸಣೆಗೆ ಮಾದರಿ ರವಾನೆ
126 ಮಂದಿ    - ತಪಾಸಣಾ ವರದಿ ಕೈ ಸೇರಿರುವುದು
123 ಮಂದಿ    - ಈವರೆಗೆ ನೆಗೆಟಿವ್ ಪ್ರಕರಣ
14 ಮಂದಿ      - ವರದಿ ಬರಲು ಬಾಕಿಯಿದೆ 
26 ಮಂದಿ      - ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ
3 ಮಂದಿ        - ಆಸ್ಪತ್ರೆಯ ಐಸೊಲೇಶನ್ಗೆ ದಾಖಲು
1056 ಮಂದಿ  -  ಮನೆ ಮತ್ತು ಆಸ್ಪತ್ರೆಯಲ್ಲಿ ನಿಗಾದಲ್ಲಿ