ಉಡುಪಿ, ಮಾ.23 (Daijiworld News/MB) : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಸಂಖ್ಯೆ ಹೆಚ್ಚಾಗಿದ್ದು ಭಾನುವಾರ ಒಂದೇ ದಿನದಲ್ಲಿ 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇತ್ತೀಚೆಗೆ ಜಪಾನ್, ಸೌದಿ ಅರೇಬಿಯಾ, ಸಿಂಗಪುರ, ಮಸ್ಕತ್, ಅಬುದಾಬಿ, ಮುಂಬೈ, ತೆಲಂಗಾಣದಿಂದ ವಾಪಾಸ್ ಆಗಿದ್ದ 10 ಜನ ಹಾಗೂ ಸ್ಥಳೀಯ 6 ಜನರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿರುವ ಹಿನ್ನಲೆಯಲ್ಲಿ ಅವರಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಂಕಿತ 16 ಜನರಲ್ಲಿ 11 ಪುರುಷರು ಹಾಗೂ ಐವರು ಮಹಿಳೆಯರಾಗಿದ್ದು ಅವರನ್ನು ಐಸೊಲೇಷನ್ ವಾರ್ಡ್ನಲ್ಲಿ ಇರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಡಿಎಚ್ಒ ಸುಧೀರ್ ಚಂದ್ರ ಸೂಡ, ಶಂಕಿತರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು 26 ಜನರ ವೈದ್ಯಕೀಯ ಪರೀಕ್ಷಾ ವರದಿ ಬರಬೇಕಿದೆ ಎಂದು ತಿಳಿಸಿದ್ದಾರೆ.