ಮಂಗಳೂರು, ಮಾ.18 (Daijiworld News/MB) : ಆಡಳಿತಾತ್ಮಕ ಸಮಸ್ಯೆಯಿಂದಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬುಧವಾರ ಹಾಗೂ ಗುರುವಾರ ತೆರಲುವ ಎಲ್ಲಾ ಇಂಡಿಗೋ ವಿಮಾನ ಸಂಚಾರವನ್ನು ರದ್ದು ಮಾಡಲಾಗಿದೆ.

ಬೆಂಗಳೂರಿಗೆ ಮಂಗಳೂರಿನಿಂದ ದಿನಕ್ಕೆ ಮೂರು ವಿಮಾನಗಳು ಸಂಚಾರ ಮಾಡುತ್ತಿದ್ದು ಬುಧವಾರ ಹಾಗೂ ಗುರುವಾರದ ಈ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ.
ಹಾಗೆಯೇ ಕೋಲ್ಕತ್ತಾಕ್ಕೆ ತೆರಳುವ ವಿಮಾನವನ್ನು ರದ್ದು ಮಾಡಲಾಗಿದೆ.
ಮಂಗಳವಾರ ಕೊರೊನಾ ವೈರಸ್ ಮೂಂಜಾಗ್ರತಾ ಕ್ರಮವಾಗಿ ಭಾರತ ಸರಕಾರದ ಸೂಚನೆಯ ಮೇರೆಗೆ ಸೌದಿ ಅರೇಬಿಯಾ, ಕುವೈತ್, ಕತಾರ್ಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನಯಾನ ಸೇವೆ ಸ್ಥಗಿತಗೊಳಿಸಲಾಗಿದೆ.