ಮಂಗಳೂರು , ಮಾ.14 (DaijiworldNews/PY) : "ಮುಂಜಾಗ್ರತಾ ಕ್ರಮಕ್ಕಾಗಿ ಸರ್ಕಾರ ಏನು ಕ್ರಮ ತೆಗೆದುಕೊಳ್ಳಲು ಹೇಳಿದೆ. ಏನೇನು ಕ್ರಮ ಆಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊರೊನಾ ಬಗ್ಗೆ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ಹಿನ್ನೆಲೆ ಸಂಸದರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಕದ್ದುಮುಚ್ಚಿ ಏನು ಮಾಡಬೇಡಿ. ಸುಳ್ಳು ಹೇಳಬೇಡಿ. ಎಲ್ಲಾ ಮೀಡಿಯಾಗಳಲ್ಲಿ ಬಂದಿದೆ. ಈ ಸಭೆ ನಡೆಸಿರುವುದು ನಿಮ್ಮ ಬಳಿ ವರದಿ ಪಡೆದು ಸುಮ್ಮನೆ ಕುಳಿತುಕೊಳ್ಳಲು ಅಲ್ಲ" ಎಂದು ಗರಂ ಆದರು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ನಳಿನ್, "ಬಸ್ನಲ್ಲಿ ಹೋಗುವವರ ಹಾಗೆ ಅವಸರ ಮಾಡುತ್ತಿದ್ದೀರಾ. ನಾನು ಹೇಳುವುದನ್ನು ಕೇಳದೇ ಮಾತನಾಡುತ್ತಾ ಕುಳಿತಿದ್ದೀರಾ. ನಿಮಗೆ ಕೇಳೋಕೆ ಆಗಲ್ಲ, ಇನ್ನು ಕೆಲಸ ಹೇಗೆ ಮಾಡ್ತೀರಾ. ಇದು ತುಂಬಾ ಸೀರಿಯಸ್ ಆದ ಸಭೆ. ಇಲ್ಲಿ ಸರಿಯಾದ ಚರ್ಚೆ ಆಗಬೇಕು" ಎಂದು ತಿಳಿಸಿದರು.