ಬೆಳ್ತಂಗಡಿ, ಜ 28 (DaijiworldNews/SM): ರಸ್ತೆ ಅಪಘಾತವೊಂದರಲ್ಲಿ ವೃದ್ಧರೊಬ್ಬರು ದಾರುಣವಾಗಿ ಮೃತ ಪಟ್ಟ ಘಟನೆ ಅಳದಂಗಡಿ ಎಂಬಲ್ಲಿ ಮಂಗಳವಾರ ನಡೆದಿದೆ.

ಪಿಲ್ಯ ಗ್ರಾಮದ ಪಾಸ್ಕಲ್ ಡೇಸಾ(69) ಎಂಬುವರು ಮೃತ ದುರ್ದೈವಿಯಾಗಿದ್ದಾರೆ. ಇವರು ತಮ್ಮ ದ್ವಿಚಕ್ರ ವಾಹನದಲ್ಲಿ ನಾರಾವಿ ಕಡೆಯಿಂದ ಅಳದಂಗಡಿಗೆ ಬರುತ್ತಿದ್ದಾಗ ಗುರುವಾಯನಕೆರೆ ಕಡೆಯಿಂದ ಕಳೆಂಜದ ರಾಮಣ್ಣ ಗೌಡ ಎಂಬುವರು ಚಲಾಯಿಸುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ತಲೆ, ಕಾಲಿಗೆ ಗಂಭೀರ ಗಾಯಗೊಂಡರು.
ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.