ವಿಟ್ಲ, ಜ.14 (Daijiworld News/PY) : ವಿಟ್ಲದ ಕೊಡಂಗಾಯಿ ಸಮೀಪದ ರಾಧುಕಟ್ಟೆ ಎಂಬಲ್ಲಿ ಓಮ್ನಿ ಹಾಗೂ ವೆಂಚರ್ ವಾಹನಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಪುರುಷರು, ಮಹಿಳೆಯರು, ಮಕ್ಕಳು ಸಹಿತ 7 ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.




ಅಪಘಾತದಲ್ಲಿ ಕುಂಡಡ್ಕ ಅಬ್ದುಲ್ಲಾ ಹಾಜಿ ಅವರ ಸ್ಥಿತಿ ಗಂಭೀರ ಗಾಯಗೊಂಡಿದ್ದು, ಅವರ ಪುತ್ರ ಅಶ್ರಫ್, ಖತೀಜ, ಆಸಿಯಮ್ಮ, ಆರು ತಿಂಗಳ ಇಬ್ಬರು ಮಕ್ಕಳು ಹಾಗೂ ಐದು ವರ್ಷದ ಮಗು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಲೆತ್ತೂರು ಕಡೆಯಿಂದ ಓಮ್ನಿಯಲ್ಲಿ ವಿಟ್ಲ ಕಡೆಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ವೆಂಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.