ಮಂಗಳೂರು, ಜ 14 (Daijiworld News/MSP): ದ.ಕ ಮತ್ತು ಉಡುಪಿ ಜಿಲ್ಲಾ ’ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ಎನ್ಆರ್ಸಿ, ಸಿಎಎ ವಿರುದ್ದ ಅಡ್ಯಾರ್ ನ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಜ.15ರ ಬುಧವಾರ ನಡೆಯಲಿರುವ ಬೃಹತ್ ಪ್ರತಿಭಟನಾ ಸಮಾವೇಶದ ಹಿನ್ನಲೆಯಲ್ಲಿ ನಗರದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ.




















ಈಗಾಗಲೇ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ, ನಗರದ ಪೊಲೀಸ್ ಮೈದಾನದಲ್ಲಿ ಭದ್ರತೆಗಾಗಿ ಹೊರಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳ ರೋಲ್ ಕಾಲ್ ಪರೇಡ್ ನಡೆಸಲಾಗಿದ್ದು, ನಾಳಿನ ಸಮಾವೇಶದ ಬಗ್ಗೆ ಹಾಗೂ ಭದ್ರತೆಯ ವಿಚಾರವಾಗಿ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಡ್ಯಾರ್ ಸಮಾವೇಶದ ಪ್ರಯುಕ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೂವರು ಎಡಿಜಿಪಿ , 1 ಐಜಿಪಿ, 11 ಜನ ಎಸ್ಪಿ, 18 ಎಎಸ್ಪಿ,100 ಜನ ಡಿವೈಎಸ್ಪಿ, 300 ಜನ ಇನ್ಸ್ಫೆಕ್ಟರ್ , 500 ಪಿ.ಎಸ್.ಐ ರೋಲ್ ಕಾಲ್ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸಮಾವೇಶದಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಹರ್ಷ ಮಂದರ್ ಮತ್ತು ಕಣ್ಣನ್ ಗೋಪಿನಾಥನ್ , ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್ , ನ್ಯಾಯವಾದಿ ಸುಧೀರ್ ಮುರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ.