ಮಂಗಳೂರು,ಜ 13 (Daijiworld News/MSP): ಭಾನುವಾರ ರಾತ್ರಿ ದ್ವಿಚಕ್ರದಲ್ಲಿ ಸಾಗುತ್ತಿರುವಾಗ ತನ್ನ ವಾಹನ ಸ್ಕಿಡ್ ಆದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ವಿದ್ಯಾರ್ಥಿಯೋರ್ವ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜ.13 ರ ಸೋಮವಾರ ಮುಂಜಾನೆ ಮೃತಪಟ್ಟಿದ್ದಾನೆ.

ಮೃತ ವಿದ್ಯಾರ್ಥಿಯನ್ನು ಅತ್ತಾವರ ನಿವಾಸಿ ಮೊಹಮ್ಮದ್ ಒಮರ್(18 ) ಎಂದು ಗುರುತಿಸಲಾಗಿದೆ. ಈತ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ.