ಮಂಗಳೂರು, ಜ.13 (Daijiworld News/PY) : ಜನವರಿ 12 ರ ಭಾನುವಾರ ದೇರಳಕಟ್ಟೆಯಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಬಳಸಲಾಗಿದ್ದ 2,500 ಕುರ್ಚಿಗಳನ್ನು ತುಂಬಿದ್ದ ಈಚರ್ ವಾಹನವು ರಾತ್ರಿ ಸುಮಾರು 2:30 ಗಂಟೆಗೆ ಬೆಂಕಿಗಾಹುತಿಯಾಗಿದ್ದು ಅಪರಿಚಿತ ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎನ್ನುವ ಸಂಶಯವಿದೆ.




ಭಾನುವಾರ ದೇರಳಕಟ್ಟೆಯಲ್ಲಿ ಸಿಎಎ ವಿರೋಧಿ ಪ್ರತಿಭಟನಾ ರ್ಯಾಲಿ ನಡೆದಿದ್ದು, ಪೌರತ್ವ ಸಂರಕ್ಷಣಾ ಸಮಿತಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.
ರ್ಯಾಲಿ ಮುಗಿದ ಬಳಿಕ ಕುರ್ಚಿಗಳನ್ನು ಈಚರ್ ವಾಹನಕ್ಕೆ ಲೋಡ್ ಮಾಡಲಾಗಿದ್ದು, ಕುರ್ಚಿಗಳನ್ನು ತುಂಬಿದ್ದ ವಾಹನಕ್ಕೆ ಅಪರಿಚಿತರು ಬೆಂಕಿ ಹಚ್ಚಿದ್ದಾರೋ ಅಥವಾ ಆಕಸ್ಮಕವಾಗಿ ಬೆಂಕಿ ಹತ್ತಿಕೊಂಡಿದೆಯೋ ಎಂಬ ಅನುಮಾನಗಳಿವೆ.
ಘಟನಾ ಸ್ಥಳಕ್ಕೆ ನೂರಾರು ಜನ ಜಮಾಸಿಯಿದ್ದು ಘಟನೆಯ ಬಗ್ಗೆ ಸರಿಯಾದ ತನಿಖೆ ಮಾಡದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.