ಬಂಟ್ವಾಳ, ನ.21 (DaijiworldNews/TA): ತಾಲೂಕಿನ ಸೂರ್ನಾಡಿನ ಹನೀಫ್ ಎಂಬವರ ಮನೆಯ ಮುಂಭಾಗದಲ್ಲಿರುವ ಗುಡ್ಡದಲ್ಲಿ ಸುಮಾರು 6 ಅಡಿ ಉದ್ದದ ಬೃಹತ್ ಗಾತ್ರದ ನಾಗರಹಾವೊಂದು ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಇದೇ ಗುಡ್ಡದಲ್ಲಿ ಅಡಗಿ ಕುಳಿತಿದ್ದ ನಾಗರಹಾವು ಮನೆಯ ಕೆಲವು ಕೋಳಿಗಳನ್ನು ಕೊಂದು ಹಾಕಿದ್ದು, ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮನೆಯವರು ಭಯಬೀತರಾಗಿದ್ದರು. ಈ ಕುರಿತು ತಕ್ಷಣ ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡ್ಡೂರು ಅವರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅವರು ಕಾರ್ಯಾಚರಣೆ ನಡೆಸಿ, ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಅದನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಯಿತು.