ಮಂಗಳೂರು,ನ.20 (DaijiworldNews/AK): ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಂಗಳೂರು ತಾಲೂಕು ಅನುಷ್ಠಾನ ಸಮಿತಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಅಲೆಸ್ಟೈನ್ ಕ್ಲೈವ್ ಡಿಕುನ್ಹಾ ಅವರ ಪದಗ್ರಹಣ ಇಂದು ನಡೆಯಿತು.

ಮಂಗಳೂರು ತಾಲೂಕು ಪಂಚಾಯತ್ ನ ಗ್ಯಾರಂಟಿ ಸಮಿತಿ ಕಚೇರಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರು ನೂತನ ಅಧ್ಯಕ್ಷರಿಗೆ ಶಾಲು ಹೊದಿಸುವ ಮೂಲಕ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ನಿಕಟಪೂರ್ವ ಅಧ್ಯಕ್ಷರಾಗಿದ್ದ ಸುರೇಂದ್ರ ಬಿ. ಕಂಬಳಿ ಅವರು , ಈ ವರೆಗೆ ಉತ್ತಮವಾಗಿ ಕೆಲಸ ಮಾಡಿದ್ದು, ಈ ಮೊದಲು ನಡೆದಿದ್ದ ತಾಲೂಕು ಮಟ್ಟದ ಗ್ಯಾರಂಟಿ ಸಮಾವೇಶವೇ ಉತ್ತಮ ಉದಾಹರಣೆ. ಅವರು ಅಧ್ಯಕ್ಷ ಸ್ಥಾನಕ್ಕೆ ನ್ಯಾಯ ಕೊಟ್ಟಿದ್ದಾರೆ. ಹಾಗೆಯೇ ಇನ್ನು ಮುಂದೆಯೂ ಅಲೆಸ್ಟೈನ್ ಕ್ಲೈವ್ ಡಿಕುನ್ಹಾ ಅವರು ಉತ್ತಮ ಕಾರ್ಯನಿರ್ವಹಿಸಲಿದ್ದಾರೆ ಎಂಬ ಆಶಯ ನನಗಿದೆ ಎಂದು ಅವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಸುರೇಂದ್ರ ಬಿ ಕಂಬಳಿ, ಸ್ಟ್ಯಾನಿ ಅಲ್ವಟ್ಸ್, ಶ್ಯಾಲೆಟ್ ಪಿಂಟೂ, ಪದ್ಮರಾಜ್ ಆರ್ ಪೂಜಾರಿ, ನಾಗೇಂದ್ರ ಕುಮಾರ್ ಜಪ್ಪಿನಮೊಗರು, ಕುಮಾರಿ ಅಪ್ಪಿ, ಮೀನಾ ಟೆಲ್ಲೀಸ್, ಲಿವಿಟ ನೊರೆನ್ಹಾ, ಅನಿತಾ ಡಿ ಸೋಜಾ, ಕವಿತ ವಾಸು, ಶಶಿಕಲಾ ಪದ್ಮನಾಭ, ಯುಪಿ ಇಬ್ರಾಹಿಂ, ರಚನಾ ಅಧ್ಯಕ್ಷರಾದ ಜಾನ್ ಮೊಂತೆರೋ, ಎಮ್ ಸಿಸಿ ಬ್ಯಾಂಕ್ ನ ಮುಖ್ಯಸ್ಥರಾದ ಅನಿಲ್ ಲೋಬೋ, ಮಾಜಿ ಮೇಯರ್ ಶಶಿಧರ್ ಹೆಗಡೆ ಹಾಗೂ ಹಲವಾರು ಗಣ್ಯರು ಮತ್ತು ಗ್ಯಾರಂಟಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.