ವಿಟ್ಲ, ನ.20 (DaijiworldNews/TA): ರಾಜ್ಯದ 16 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ಗಳು ಉದ್ಘಾಟನೆಯಾದ ಸಂದರ್ಭದಲ್ಲಿ, ಗುರುವಾರ (ನ. 19) ವಿಟ್ಲದ ಇಂದಿರಾ ಕ್ಯಾಂಟೀನ್ ಅನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು.


ಬಡವರ ಹಸಿವು ನೀಗಿಸಲು ಕ್ಯಾಂಟೀನ್ ಸಹಕಾರಿಯಾಗಿದ್ದು, ಸಿಬ್ಬಂದಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಗೆ ತಲಾ ರೂ. 1 ಕೋಟಿ ಅನುದಾನ ಬರಲಿದ್ದು, ಅಭಿವೃದ್ಧಿ ಕಾರ್ಯಗಳಿಂದ ಮಾತ್ರ ದೇಶ ವಿಶ್ವಗುರುವಾಗಲು ಸಾಧ್ಯ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ತಹಶೀಲ್ದಾರ್ ಮಂಜುನಾಥ್ ಜಿ., ರಾಮಣ್ಣ ಪಿಲಿಂಜ, ಡಾ. ಎಂ. ಪಿ. ಶ್ರೀನಾಥ್, ಡಾ. ಸಂತೋಷ್ ಕುಮಾರ್, ಸುಧಾಕರ್, ಅಬ್ದುಲ್ ಹಮೀದ್ ಗೋಳ್ತಮಜಲು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.