ಬಂಟ್ವಾಳ, ಅ.26 (DaijiworldNews/TA): ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿ.ಸಿ.ರೋಡಿನಲ್ಲಿ ಪಥಸಂಚಲನ ನಡೆಯಿತು.


ಬಿಸಿರೋಡಿನ ಮಯ್ಯರಬೈಲಿನಿಂದ ಆರಂಭಗೊಂಡ ಪಥಸಂಚಲನವು ಬಿ.ಸಿ.ರೋಡು ಸರ್ಕಲ್ ಮೂಲಕ ಸಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಸಮಾಪ್ತಿಗೊಂಡಿತು. ಇದೇ ಸಂದರ್ಭದಲ್ಲಿ ವಿಟ್ಲ ಪ್ರಖಂಡದ ವತಿಯಿಂದ ಸಂಜೆ ಕಲ್ಲಡ್ಕದ ರಾಜರಸ್ತೆ ಪೇಟೆಯಲ್ಲಿ ವಿಜಯದಶಮಿ ಪಥಸಂಚಲನ ನಡೆಯಿತು.
ಧ್ವಜಾರೋಹಣ ಹಾಗೂ ಸಂಘದ ಪ್ರಾರ್ಥನೆಯ ಬಳಿಕ ಘೋಷ್ ವಾದ್ಯಗಳೊಂದಿಗೆ ಪಥಸಂಚಲನ ಸಾಗಿತು. ಸಂಘದ ಸ್ವಯಂಸೇವಕರು ಪಾಲ್ಗೊಂಡಿದ್ದರು. ಎರಡೂ ಕಡೆ ಪಥಸಂಚಲನದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.