ಮಂಗಳೂರು, ಅ.25 (DaijiworldNews/AA): ಆಸರೆ ಗೆಳೆಯರ ಬಳಗ ಮಂಗಳೂರು (ರಿ.) ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ 'ಆಸರೆ-ದಶ ಸಂಭ್ರಮ-2027' ಕಾರ್ಯಕ್ರಮವನ್ನು ಜನವರಿ 26ರಂದು ಮಂಗಳೂರಿನ ಮಲ್ಲಿಕಟ್ಟೆಯ ಜುಗುಲ್ ಹಾಲ್ನಲ್ಲಿ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಸಾಧನೆಗಾಗಿ ರೀಟಾ ಮರಿಯಾ ಮಿನೆಜಸ್ ಅವರಿಗೆ 'ಆಸರೆ ಕೃಷಿ ರತ್ನ ಗೌರವ-2027' ನೀಡಿ ಸನ್ಮಾನಿಸಲು ನಿರ್ಧರಿಸಲಾಗಿದೆ.

2017ರಲ್ಲಿ ಸ್ಥಾಪನೆಯಾದ ಆಸರೆ ಗೆಳೆಯರ ಬಳಗವು ಶಿಕ್ಷಣ, ಆರೋಗ್ಯ, ಮಾನವೀಯ ಸೇವೆ, ಸಹಕಾರ ಹಾಗೂ ಪರಿಸರ ಸಂರಕ್ಷಣೆಯ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ನೀಡುವುದು ಹಾಗೂ ಸಾರ್ವಜನಿಕರಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಕೃಷಿ ಕ್ಷೇತ್ರವು ಸಮಾಜದ ಪ್ರಮುಖ ಅಂಗವಾಗಿದ್ದು, ಆಹಾರ ಭದ್ರತೆ ಮತ್ತು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಮಹತ್ವದ್ದಾಗಿದೆ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಮೂಲಕ ಕೃಷಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸಂಸ್ಥೆಯು 'ಆಸರೆ ಕೃಷಿ ರತ್ನ ಗೌರವ-2027' ನೀಡಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ರೀಟಾ ಮರಿಯಾ ಮಿನೆಜಸ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಅವರ ಕೃಷಿ ಕ್ಷೇತ್ರದ ಸಾಧನೆಗಳು ಹಾಗೂ ಕೊಡುಗೆಗಳ ಅಧಿಕೃತ ವಿವರಗಳನ್ನು ಪಡೆದು ಗೌರವ ಸಮರ್ಪಣೆಯ ಸಂದರ್ಭದಲ್ಲಿ ಪರಿಚಯಿಸಲು ಉದ್ದೇಶಿಸಿದೆ.
ಒಂದು ದಶಕದ ಸಮಾಜಮುಖಿ ಸೇವಾ ಪಯಣವನ್ನು ಸ್ಮರಿಸುವ 'ಆಸರೆ-ದಶ ಸಂಭ್ರಮ-2027' ಕಾರ್ಯಕ್ರಮವು ಸಂಸ್ಥೆಯ ಸೇವಾ ಬದ್ಧತೆಯನ್ನು ಪ್ರತಿಬಿಂಬಿಸುವುದರೊಂದಿಗೆ, ಕೃಷಿ ಕ್ಷೇತ್ರದ ಸಾಧಕರನ್ನು ಗೌರವಿಸುವ ವೇದಿಕೆಯಾಗಲಿದೆ.